ADVERTISEMENT

ಬಿಆರ್‌ಟಿ: ವನ್ಯಪ್ರಾಣಿ ದಾಳಿಗೆ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 4:41 IST
Last Updated 5 ಏಪ್ರಿಲ್ 2024, 4:41 IST
ಜಡಿಯ
ಜಡಿಯ   

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ‍ಪ್ರದೇಶದ ಕೆ.ಗುಡಿ ವಲಯದಲ್ಲಿ ಗುರುವಾರ ವನ್ಯಪ್ರಾಣಿ ದಾಳಿಗೆ ಸಿಲುಕಿ ಬುಡಕಟ್ಟು ಸಮುದಾಯದವರೊಬ್ಬರು ಮೃತಪಟ್ಟಿದ್ದಾರೆ. 

ಕುಳ್ಳೂರು ಗ್ರಾಮದ ಜಡಿಯ ಉರುಫ್‌ ಜಡಿಯಾಗೌಡ (56) ಮೃತಪಟ್ಟವರು. 

ಕೆ.ಗುಡಿ ವಲಯದ ಸುಂಡ್ರೆ ಹಳ್ಳ ವ್ಯಾಪ್ತಿಗೆ ಬರುವ ರಾಮಪುರ ಗಸ್ತಿನ ಸುವರ್ಣಾವತಿ ಹಿನ್ನೀರಿನ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ಸ್ಥಳವು ಅರಣ್ಯ ಗಡಿಯಿಂದ ಒಂದು ಕಿ.ಮೀ ದೂರದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ADVERTISEMENT

ಯಾವ ಪ್ರಾಣಿಯ ದಾಳಿಯಿಂದ ಅವರು ಮೃತಪಟ್ಟಿದ್ದಾರೆ ಎಂಬುದು ನಿಖರವಾಗಿ ತಿಳಿದಿಲ್ಲ. ಆನೆ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. 

ಬೆಳಿಗ್ಗೆ ಹಿನ್ನೀರಿಗೆ ಮೀನು ಹಿಡಿಯಲು ಜಡಿಯ ಅವರು ತೆರಳುತ್ತಿದ್ದ ಸಂದರ್ಭದಲ್ಲಿ ವನ್ಯಪ್ರಾಣಿ ದಾಳಿ ಮಾಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಸ್ಥಳಕ್ಕೆ ಸಿಸಿಎಫ್‌ ಹೀರಾಲಾಲ್‌, ಬಿಆರ್‌ಟಿ ಡಿಸಿಎಫ್‌ ದೀಪ್‌ ಕೆ.ಕಂಟ್ರ್ಯಾಕ್ಟರ್‌ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಚಾಮರಾಜನಗರ ಪೂರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.