ಸಂತೇಮರಹಳ್ಳಿ: ಸೇತುವೆಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಮೀಪದ ಕಮರವಾಡಿ ಗೇಟ್ ಬಳಿ ಭಾನುವಾರ ನಡೆದಿದೆ.
ಚಂದ್ರನಾಯ್ಕ (30) ಮೃತಪಟ್ಟವರು. ಸವಾರ ನರೇಂದ್ರ ಜತೆಗೆ ಶ್ರೀರಂಗಪಟ್ಟಣದಿಂದ ಗಾರೆ ಕೆಲಸ ಮುಗಿಸಿಕೊಂಡು ಸ್ವಗ್ರಾಮ ಪಣ್ಯದ ಹುಂಡಿ ಗ್ರಾಮಕ್ಕೆ ತೆರಳುವಾಗ ಕಮರವಾಡಿ ಗೇಟ್ ಬಳಿ ಹಳ್ಳದ ಗುಂಡಿಗೆ ದ್ವಿಚಕ್ರ ಇಳಿದು ಸೇತುವೆಗೆ ಡಿಕ್ಕಿ ಹೊಡೆದಿದೆ. ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಸಂತೇಮರಹಳ್ಳಿ ಪೊಲೀಸರು ಭೇಟಿ ನೀಡಿದರು. ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.