ಚಾಮರಾಜನಗರ: ಇತ್ತೀಚೆಗೆ ನಿಧನರಾದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ಗೌರವಾರ್ಥ ಇದೇ 8ರಂದು ನಡೆಸಲು ತೀರ್ಮಾನಿಸಲಾಗಿದ್ದ ನುಡಿನಮನ ಕಾರ್ಯಕ್ರಮವನ್ನು 20ಕ್ಕೆ ಮುಂದೂಡಲಾಗಿದೆ.
ಪಕ್ಷಾತೀತವಾಗಿ ಜಾತ್ಯತೀತವಾಗಿ ಕಾರ್ಯಕ್ರಮ ಮಾಡಲು, ವಿವಿಧ ಪಕ್ಷಗಳ, ಸಮುದಾಯಗಳ ಮುಖಂಡರು ತೀರ್ಮಾನಿಸಿದ್ದಾರೆ.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಿ.ಶ್ರೀನಿವಾಸಪ್ರಸಾದ್ ಅಭಿಮಾನಿಗಳ ಬಳಗದ ವತಿಯಿಂದ ನಡೆದ ನುಡಿನಮನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ‘ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಇದೇ 8 ರಂದು ನುಡಿನಮನ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕಾರ್ಯಕ್ರಮಕ್ಕೆ ಸುತ್ತೂರು ಶ್ರೀಯವರನ್ನು ಆಹ್ವಾನಿಸಲು ಸಂದರ್ಭದಲ್ಲಿ 8ರಂದು ಅಮಾವಾಸ್ಯೆ ಪ್ರಯುಕ್ತ ಶ್ರೀಮಠದಲ್ಲಿ ಪೂಜಾ ಕಾರ್ಯಕ್ರಮಗಳು ಇರುವುದರಿಂದ 20 ರಂದು ಆಯೋಜಿಸಲು ಸಲಹೆ ಹಾಗೂ ದಿನಾಂಕ ಕೊಟ್ಟರು. ಹಾಗಾಗಿ ಅಂದು ನುಡಿನಮನ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಗಿದೆ’ ಎಂದರು.
‘ನುಡಿನಮನ ಕಾರ್ಯಕ್ರಮಕ್ಕೆ ಬೌದ್ಧ ಭಿಕ್ಷುಗಳು, ಸಾಹಿತಿಗಳು, ಚಿಂತಕರು ಹಾಗೂ ಶ್ರೀನಿವಾಸ ಪ್ರಸಾದ್ ಅವರ ಒಡನಾಡಿಗಳು ಹಾಗೂ ಪತ್ನಿ, ಪುತ್ರಿಯರನ್ನು ಆಹ್ವಾನಿಸಲಾಗುವುದು’ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಜಿ.ಪಂ.ಮಾಜಿ ಅಧ್ಯಕ್ಷೆ ನಾಗಶ್ರೀಪ್ರತಾಪ್, ಎಪಿಎಂಸಿ ನಿರ್ದೇಶಕ ಪ್ರತಾಪ್, ಬಿಎಸ್‌ಪಿ ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಸಿ.ಕೆ.ಮಂಜುನಾಥ್, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಸೂರ್ಯಕುಮಾರ್, ನಗರಸಭಾ ಮಾಜಿ ಸದಸ್ಯ ಕೇಶವಮೂರ್ತಿ, ರಾಮಸಮುದ್ರ ಬಸವರಾಜು, ಕೋಡಿಮೋಳೆ ರಾಜಶೇಖರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸ್ವಾಮಿ, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಅಶೋಕ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವು, ಆರ್.ಮಹದೇವು, ಬ್ಲಾಕ್ ಕಾಂಗ್ರೆಸ್ ಅಧ್ಗಕ್ಷ ಮಹಮ್ಮದ್ ಅಸ್ಗರ್, ಶೇಖರಪ್ಪ, ಬಸಪ್ಪನಪಾಳ್ಯ ನಟರಾಜು, ಮಹದೇವಸ್ವಾಮಿ, ಹೆಬ್ಬಸೂರುರಂಗಸ್ವಾಮಿ, ವೀರಭದ್ರ, ಕಾಗಲವಾಡಿ ಚಂದ್ರು, ನಲ್ಲೂರು ಮಹದೇವಸ್ವಾಮಿ, ಮೋಹನ್, ಮುತ್ತಿಗೆ ಮೂರ್ತಿ, ಸಿದ್ದಯ್ಯನಪುರ ಶಿವರಾಜು, ರಾಮಸಮುದ್ರ ರಾಜಪ್ಪ, ನಾಗವಳ್ಳಿ ಕಮಲ್, ಸರಗೂರು ಕೈಸರ್, ವಕೀಲ ಮಂಜು, ದೊರೆ, ಗೋವಿಂದ ರಾಜು, ನಂಜುಂಡಸ್ವಾಮಿ, ನಾಗರಾಜು, ಮಹೇಶ್ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.