ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಸಫಾರಿ ವಲಯದಲ್ಲಿ ಬೇಟೆಯಾಡಲು ಬಂದ ಹುಲಿಯನ್ನೇ ಕಾಡೆಮ್ಮೆಯೊಂದು ಹಿಮ್ಮೆಟ್ಟಿಸಿದ್ದು ಈ ವಿಡಿಯೊ ಜಾಲತಾಣಗಳಲ್ಲಿ ಸುದ್ದಿಯಾಗಿದೆ.
ಕಾಡಿನಲ್ಲಿ ಮೇಯುತ್ತಿದ್ದ ಕಾಡೆಮ್ಮೆ ಮೇಲೆ ಹಿಂದಿನಿಂದ ಹುಲಿ ಏಕಾಏಕಿ ದಾಳಿ ನಡೆಸಿದಾಗ ಕಾಡೆಮ್ಮೆಯು ಹುಲಿಗೆ ಕಾಲಿನಿಂದ ಒದ್ದು ಎದುರಿಸಿ ನಿಂತಿದೆ. ಕಾಡೆಮ್ಮೆಯ ಆಕ್ರೋಶ ಭರಿತ ದಾಳಿಗೆ ಬೆದರಿದ ಹುಲಿ ಸ್ಥಳದಿಂದ ಕಾಲ್ಕಿತ್ತಿದೆ.
ಈ ದೃಶ್ಯವನ್ನು ಬಂಡೀಪುರ ಸಫಾರಿಗೆ ತೆರಳಿದ್ದ ಪ್ರವಾಸಿಗರು ಸೆರೆ ಹಿಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.