ಹನೂರು (ಚಾಮರಾಜನಗರ): ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ರಕ್ಷಿತಾರಣ್ಯ ಬೈಲೂರು ವನ್ಯಜೀವಿ ವಲಯದಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದ್ದು, ಸಿಬ್ಬಂದಿ ಬೆಂಕಿ ಆರಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ ಎಂದು ಬಿಆರ್‌ಟಿ ಡಿಸಿಎಫ್ ದೀಪ್ ಜೆ. ಕಾಂಟ್ರ್ಯಾಕ್ಟರ್ ತಿಳಿಸಿದ್ದಾರೆ.
ಬೈಲೂರು ವನ್ಯಜೀವಿ ವಲಯದ ಕೌಳಿಹಳ್ಳ ಅಣೆಕಟ್ಟಿನ ಬಳಿಯ ರೇಖೆಗೆ ಬೆಂಕಿ ಹಾಕಲಾಗಿದೆ.
ಡ್ರೋನ್ ತಂಡದೊಂದಿಗೆ 60 ಸಿಬ್ಬಂದಿ ಮತ್ತು ಅಧಿಕಾರಿಗಳು ಬೆಂಕಿ ನಂದಿಸುತ್ತಿದ್ದಾರೆ.
'ಅರಣ್ಯ ಪ್ರದೇಶವು ಕಡಿದಾಗಿದ್ದು, ಇಳಿಜಾರಾಗಿದೆ. ನೆಲ ಬೆಂಕಿಯಾಗಿದ್ದು, ಬೆಂಕಿ ನಂದಿಸಿದ ಬಳಿಕ ಅರಣ್ಯ ನಷ್ಟದ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ' ಎಂದು ಡಿಸಿಎಫ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.