ಯಳಂದೂರು: ವನಿತೆಯರು ಬದುಕು ಕಟ್ಟಿಕೊಳ್ಳಲು ಕಲಿಕೆ ಅನಿವಾರ್ಯ ಎಂಬ ಮಾತಿದೆ. ಆ ಮೂಲಕಸ್ವಾವಲಂಬನೆ, ಲಿಂಗ ಸಮಾನತೆ, ಮೇಲುಕೀಳು ಮತ್ತು ಸರ್ವರಿಗೂ ಸಮಾನತೆ ದೊರೆಯುತ್ತದೆಎಂಬುದು ಇತ್ತೀಚೆಗೆ ಕೇಳಿ ಬರುತ್ತಿರುವ ಮಾತು. ಇದಕ್ಕೆ ಮಾದರಿಯಾಗಿ ಮೆಲ್ಲಹಳ್ಳಿಯಪೌಷ್ಟಿಕಾ ಆಹಾರ ತಯಾರಿಕಾ ಉದ್ಯಮದಲ್ಲಿ ಸೈ ಎನಿಸಿಕೊಂಡಿರುವ ಸ್ತ್ರೀಯರು ಇತರರಿಗೆ ಮಾದರಿಯಾಗಿದ್ದಾರೆ.
ತಾಲ್ಲೂಕಿನ ವಿವಿಧ ಭಾಗಗಳ ಈ ಮಹಿಳೆಯರು ವಿದ್ಯಾಭ್ಯಾಸದ ಕೊರತೆ ನಡುವೆಯೂ ಕುಟುಂಬದಿಂದಹೊರಬಂದು ಅರೆ ವೃತ್ತಿ ಕೌಶಲಗಳ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಮನೆ ಮತ್ತು ಮಕ್ಕಳಖರ್ಚು ವೆಚ್ಚ ನೀಗಿಸಲು ಆಹಾರ ಸಂಸ್ಕರಣಾ ಘಟಕದಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ.ಗುಣಮಟ್ಟದ ಸೇವೆ ಒದಗಿಸುವ ಮೂಲಕ ಇವರು ಅಂಗನವಾಡಿ ಕೇಂದ್ರಗಳಿಗೆ ಆಹಾರಪೂರೈಸುತ್ತಾರೆ.
‘ಮೆಲ್ಲಹಳ್ಳಿಯಲ್ಲಿ ಹತ್ತು ವರ್ಷಗಳಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಗುಣಮಟ್ಟದ ಆಹಾರವನ್ನು ಸಂಸ್ಕರಿಸಿ ವಿತರಿಸುತ್ತದೆ. ಕೊಳ್ಳೇಗಾಲ ಮತ್ತು ಹನೂರುತಾಲ್ಲೂಕುಗಳಿಗೆ ಇಲ್ಲಿಂದ ಕಡಲೆ, ಶೇಂಗಾ, ಸಕ್ಕರೆ, ರಾಗಿ, ಸಾಂಬಾರ ಪುಡಿಗಳನ್ನುಸಿದ್ಧ ವಸ್ತುಗಳಾಗಿ ನಿಗದಿತ ಸಮಯದೊಳಗೆ ವಿತರಿಸಲಾಗುತ್ತದೆ.
ಯಂತ್ರ ತಿರುಗಣೆ, ಭಾರವಾದ ಪದಾರ್ಥ ಎತ್ತುವುದು, ಹಾಗೂ ಮಕ್ಕಳಿಗೆ ಇಷ್ಟವಾಗುವಂತೆಆಹಾರ ಸಂಸ್ಕರಿಸುವ ತಾಂತ್ರಿಕ ಪರಿಣತಿ ನಮ್ಮದು. ಪುರುಷ ಪ್ರಧಾನ ಸಮಾಜದಲ್ಲಿ ನಮ್ಮದುಡಿಮೆಯೂ ಸೇರಿಕೊಂಡಿದೆ. ಕಾಯಕ ಮತ್ತು ಸಮಯ ಪಾಲನೆಯಲ್ಲಿ ಎಂದಿಗೂ ರಾಜಿಮಾಡಿಕೊಳ್ಳುವುದಿಲ್ಲ’ ಎನ್ನುತ್ತಾರೆ ವ್ಯವಸ್ಥಾಪಕಿ ಬೇಬಿ.
‘ಆಹಾರಗಳ ಗುಣಮಟ್ಟದಿಂದ ಪ್ಯಾಕಿಂಗ್ ತನಕ, ಯಂತ್ರದ ಚಾಲನೆಯಿಂದ ಸೀಲ್ ಮಾಡುವ ತನಕಬಗಿನಿಯರ ಮೇಲ್ವಿಚಾರಣೆ ಇರುತ್ತದೆ. ಗೋಧಿ ಮತ್ತು ರಾಗಿ ಪುಡಿಯ ಸುವಾಸನೆಯು ಮಕ್ಕಳು ಅದನ್ನು ಸೇವಿಸುವವರೆಗೂ ಇರುವಂತೆ ಎಚ್ಚರ ವಹಿಸಲಾಗುತ್ತದೆ’ ಎನ್ನುತ್ತಾರೆ ಸಂಪಿಗೆ ಸಂಘದಅಧ್ಯಕ್ಷೆ ಎಸ್. ಗೀತಾಂಬ.
‘ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಆಹಾರ ಪೂರೈಕೆ ಮತ್ತು ಹಂಚಿಕೆಯ ತನಕ ಇಲಾಖೆಕಾಳಜಿ ವಹಿಸುತ್ತದೆ. ಹಾಗಾಗ ಭೇಟಿ ನೀಡಿ ಸುಚಿ–ರುಚಿ ವರದಿ ಮಾಡಲಾಗುತ್ತದೆ. ಆಹಾರಸಂಸ್ಕರಣೆಯ ವೇಳೆ ಕೈಗವಸು, ಮುಖಗವಸು, ಏಪ್ರಾನ್ ಬಳಸಲಾಗುತ್ತದೆ. ತೂಕ, ಅಳತೆಕ್ರಮಬದ್ಧವಾಗಿ ಇರುವಂತೆ ಎಚ್ಚರ ವಹಿಸಲಾಗುತ್ತದೆ’ ಎಂದು ಸಿಡಿಪಿಒ ಸೋಮಶೇಖರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಘಟಕದಲ್ಲಿ 21 ಮಹಿಳೆಯರು ಇದ್ದಾರೆ. ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಕರ್ತವ್ಯ. 580ಅಂಗನವಾಡಿ ಕೇಂದ್ರಗಳಿಗೆ ಹಂಚಿಕೆ ಮಾಡಲಾಗುತ್ತದೆ. ಮಾಸಿಕ ₹10 ಸಾವಿರ ಸಂಬಳವೂಕೈಸೇರುತ್ತದೆ. ನಮಗೆ ತಾಂತ್ರಿಕ ಶಿಕ್ಷಣ ಇಲ್ಲ. ಹಾಗಾಗಿ, ಸಂಘಟಿತ ಉದ್ಯಮಗಳಲ್ಲಿನೀಡಲಾಗುವ ಪಿಎಫ್ ಮತ್ತು ಪ್ರೋತ್ಸಾಹಕ ಯೋಜನೆಗಳನ್ನು ನಿರೀಕ್ಷಿಸುವಂತೆ ಇಲ್ಲ.ಆದರೂ, ದುಡಿಮೆಯಿಂದ ಆರ್ಥಿಕ ಸುಭದ್ರತೆ ಮತ್ತು ಸಮಾಜದಲ್ಲಿ ನೆಲೆ–ಬೆಲೆ ಧಕ್ಕಿದೆ’ ಎನ್ನುತ್ತಾರೆ ಮಹದೇವಮ್ಮ ಮತ್ತು ಚಿನ್ನಮ್ಮ.
ಗ್ರಾಮೀಣ ಸ್ತ್ರೀಯರ ಸಹಭಾಗಿತ್ವ
‘ಮುಂದಿನ ತಲೆಮಾರುಗಳ ಸಮಾನತೆಗಾಗಿ, ಮಹಿಳಾ ಹಕ್ಕುಗಳ ನೈಜತೆ ಮನದಟ್ಟು ಮಾಡಿ’ಎಂಬುದು ಅಂತರಾಷ್ಟ್ರೀಯ ಮಹಿಳಾ ದಿನದ ಧ್ಯೇಯ. ವಿಶ್ವಸಂಸ್ಥೆ ನೇರಳೆ ವರ್ಣದಲ್ಲಿಸ್ತ್ರೀಯರ ಸಾಧನೆ ಮತ್ತು ಅವಕಾಶಗಳನ್ನು ಬಿಂಬಿಸುತ್ತಿದೆ. ಜಾತಿ, ಧರ್ಮ, ಸಂಪ್ರದಾಯ,ದೇಶ, ಕುಲ, ವಯಸ್ಸಿನ ಹಂಗಿಲ್ಲದೆ ಎಲ್ಲ ಮಾನಿನಿಯರಿಗೂ ಸರ್ವ ಸಮಾನತೆ ನೀಡಬೇಕು.ಸಮಾಜದ ಎಲ್ಲ ಕುಟುಂಬದ ಆರ್ಥಿಕ ಅಭಿವೃದ್ಧಿಗೆ ನ್ಯಾಯ ಸಲ್ಲಿಸಲು ಇಂತಹ ಘಟಕಗಳಿಂದಸಾಧ್ಯವಾಗಿದೆ’ ಎನ್ನುತ್ತಾರೆ ಸಿಡಿಪಿಒ ಸೋಮಶೇಖರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.