ಯಳಂದೂರು: ತಾಲ್ಲೂಕಿನಲ್ಲಿ ಮುಂಜಾನೆಯಿಂದಲೇ ಮತಗಟ್ಟೆ ಅಧಿಕಾರಿಗಳು ಮತದಾನಕ್ಕೆ ಸಿದ್ಧತೆನಡೆಸಿದ್ದರೂ, ಮತದಾರನ ಉತ್ಸಾಹ ಮಾತ್ರ ನೀರಸವಾಗಿತ್ತು. ಒಂಬತ್ತು ಗಂಟೆಯ ನಂತರನಿಧಾನವಾಗಿ ಮತಗಟ್ಟೆಗೆ ಬಂದ ಜನರು ಮತದಾನಕ್ಕೆ ಬಿರುಸು ನೀಡಿದರು.
ಆರಂಭದಲ್ಲಿ ಉಪ್ಪಿನಮೋಳೆ, ಕೃಷ್ಣಾಪುರ, ಗುಂಬಳ್ಳಿ ಮತ್ತು ಯರಗಂಬಳ್ಳಿ ಗ್ರಾಮಗಳಲ್ಲಿಪುರುಷ ಮತದಾರರು ಮತ ಚಲಾಯಿಸಲು ಮುಂದಾದರು.
ಕೊಮಾರನಪುರ ಮತ್ತು ಗೌಡಹಳ್ಳಿಗಳಲ್ಲಿ ಬೆಳಿಗ್ಗೆ 10ರ ನಂತರ ಮತದಾನಕ್ಕೆ ಹೆಚ್ಚಿನಒಲವು ತೋರಿದರು. ಅಗರ ಗ್ರಾಮದಲ್ಲಿ ಬಹುತೇಕ ಯುವ ಮತದಾರರು ಮತ ಚಲಾಯಿಸಲು ಉತ್ಸಾಹತೋರಿದರು. ಮಾಂಬಳ್ಳಿ ಪಿಂಕ್ ಮತಗಟ್ಟೆ ಬಳಿ ವೃದ್ಧರು ಮತ್ತು ಅಂಧ ಮತದಾರರ ಮತಚಲಾಯಿಸಲು ಸುಗಮ ವ್ಯವಸ್ಥೆ ಕಲ್ಪಿಸಲಾಗಿತ್ತು.
ಯರಿಯೂರು ಗ್ರಾಮದಲ್ಲಿ ಮಹಿಳೆಯರು ಮಧ್ಯಾಹ್ನ 12ರ ನಂತರ ಮತಗಟ್ಟೆಗೆ ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇಲ್ಲಿನ 4 ಮತಗಟ್ಟೆಗಳಲ್ಲಿ ಹೆಚ್ಚಿನ ದಟ್ಟಣೆಮಧ್ಯಾಹ್ನ ಕಂಡು ಬಂತು. ಪಟ್ಟಣದ ಮತಗಟ್ಟೆಗಳಲ್ಲಿ ಸಂಜೆಯ ನಂತರ ವೋಟು ಚಲಾಯಿಸುವವರಸಂಖ್ಯೆಯಲ್ಲಿ ಏರುಮುಖ ಕಂಡಿತ್ತು. ಮದ್ದೂರು ಗ್ರಾಮದಲ್ಲಿ ಬಿಜೆಪಿ ಮತ್ತುಕಾಂಗ್ರೆಸ್ ಮುಖಂಡರು ರಸ್ತೆ ಬದಿ ನಿಂತು ಮತದಾರರನ್ನು ಓಲೈಸುತ್ತಿದ್ದ ದೃಶ್ಯ ಕಂಡುಬಂದಿತು.
ಬಿಳಿಗಿರಿರಂಗನಬೆಟ್ಟದ ಪೋಡುಗಳ ಬಳಿಯ ಮತಗಟ್ಟೆಗಳಲ್ಲಿ ಆರಂಭದಿಂದಲೇ ಮತ ಚಲಾಯಿಸುವವರಸಂಖ್ಯೆ ಹೆಚ್ಚಾಗಿತ್ತು. ಬಿಸಿಲು ಏರಿದ ನಂತರ ಮತ ಹಾಕುವವರ ಪ್ರಮಾಣವೂ ಕಡಿಮೆಯಾಯಿತುಎನ್ನುತ್ತಾರೆ ಸ್ಥಳೀಯರಾದ ಅಂಗಡಿ ನಾಗೇಂದ್ರ.
ಮತಗಟ್ಟೆ ಅಧಿಕಾರಿಗಳು ನೀರು ಮತ್ತು ಆಹಾರ ಸೇವನೆಗೂ ಮುಂದಾಗದೇ ಮತದಾನಪ್ರಕ್ರಿಯೆಯಲ್ಲಿ ತೊಡಗಿದ್ದರು. ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರಿಂದಗಲಾಟೆಗೆ ಅವಕಾಶ ಇರಲಿಲ್ಲ. ಉಪ್ಪಿನಮೋಳೆ ಬಿಟ್ಟುಇತರ ಕಡೆಗಳಲ್ಲಿಮತದಾನ ಸುಗಮವಾಗಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.