ಚಿಕ್ಕಬಳ್ಳಾಪುರ: ಯಾವುದೇ ಒಬ್ಬ ಚುನಾಯಿತ ಪ್ರತಿನಿಧಿ ತನ್ನ ಪಾಲಿನ ಹೊಣೆಗಾರಿಕೆಗಳನ್ನು ನಿರ್ವಹಿಸಲು ಕನಿಷ್ಠ ಮಟ್ಟದ ಓದು, ಬರಹ ಗೊತ್ತಿರಬೇಕು. ಇಲ್ಲದಿದ್ದರೆ ಅವರ ಆಡಳಿತವನ್ನು ಮತ್ತೊಬ್ಬರು ಚಲಾಯಿಸುವರು.
ಆಡಳಿತ ವಿಕೇಂದ್ರೀಕರಣದ ಮೊದಲ ಹಂತವಾದ ಗ್ರಾಮ ಪಂಚಾಯಿತಿಯ ಸದಸ್ಯರಿಗೆ ಓದು, ಬರಹ ಅತಿ ಮುಖ್ಯ. ಆದರೆ ರಾಜ್ಯದ ಬಹಳಷ್ಟು ಪಂಚಾಯಿತಿ ಸದಸ್ಯರಿಗೆ ಓದು, ಬರಹ ತಿಳಿದಿಲ್ಲ. ಈ ಕಾರಣದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಈ ಅನಕ್ಷರಸ್ಥ ಸದಸ್ಯರಿಗೆ ಓದು, ಬರಹ ಕಲಿಸಲು ಮುಂದಾಗಿದೆ.
ಆ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 305 ಮಂದಿ ಅನಕ್ಷರಸ್ಥ ಗ್ರಾಮ ಪಂಚಾಯಿತಿ ಸದಸ್ಯರು ಇದ್ದಾರೆ. ಈ ಪೈಕಿ ಗುಡಿಬಂಡೆ ತಾಲ್ಲೂಕಿನಲ್ಲಿ ಎಂಟು, ಗೌರಿಬಿದನೂರು ತಾಲ್ಲೂಕಿನಲ್ಲಿ 57, ಚಿಂತಾಮಣಿ ತಾಲ್ಲೂಕಿನಲ್ಲಿ 91, ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 32, ಬಾಗೇಪಲ್ಲಿ 73 ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ 44 ಗ್ರಾಮ ಪಂಚಾಯಿತಿ ಸದಸ್ಯರು ಅನಕ್ಷರಸ್ಥರಾಗಿದ್ದಾರೆ.
ಗುಡಿಬಂಡೆ ತಾಲ್ಲೂಕಿನ ದಪರ್ತಿ, ಹಂಪಸಂದ್ರ, ಸೋಮೇನಹಳ್ಳಿ, ಉಲ್ಲೋಡು, ವರ್ಲಕೊಂಡ, ಗೌರಿಬಿದನೂರು ತಾಲ್ಲೂಕಿನ ತಾಲ್ಲೂಕಿನ ಅಲೀಪುರ, ಬಿ. ಬೊಮ್ಮಸಂದ್ರ, ಬೈಚಾಪುರ, ಚಿಕ್ಕಕುರುಗೋಡು, ಡಿ ಪಾಳ್ಯ, ಜಿ.ಬೊಮ್ಮಸಂದ್ರ, ಜಿ ಕೊತ್ತೂರು, ಗೆದರೆ, ಹಲಗಾನಹಳ್ಳಿ, ಹುದಗೂರು, ಹಳೆಹಳ್ಳಿ, ಕಾದಲವೇಣಿ, ಕಲ್ಲಿನಾಯಕನಹಳ್ಳಿ, ಕುರುಬರಹಳ್ಳಿ, ಕುರುಡಿ, ಮುದುಗೆರೆ, ನಗರಗೆರೆ, ನಕ್ಕಲಹಳ್ಳಿ, ನ್ಯಾಮಗೊಂಡ್ಲು, ಪುರ, ರಾಮಪುರ, ಸೊಣಗಾನಹಳ್ಳಿ, ವಾಟದಹೊಸಹಳ್ಳಿ ಪಂಚಾಯಿತಿಯಲ್ಲಿ ಅನಕ್ಷರಸ್ಥ ಸದಸ್ಯರನ್ನು ಗುರುತಿಸಲಾಗಿದೆ.
ಚಿಂತಾಮಣಿ ತಾಲ್ಲೂಕಿನ ಆನೂರು, ಭತ್ತಲಹಳ್ಳಿ, ಭೂಮಿಶೆಟ್ಟಿಹಳ್ಳಿ, ಬುರಡಗುಂಟೆ, ಚಿನ್ನಸಂದ್ರ, ಎನಿಗದೆಲೆ, ಹಿರೇಕಟ್ಟಿಗೇನಹಳ್ಳಿ, ಇರಗಂಪಲ್ಲಿ, ಚಿಲಕಲನೆರಪು, ಕಡದನಮರಿ, ಕಾಗತಿ, ಕತ್ತರಿಗುಪ್ಪೆ, ಕೆಂಚಾರ್ಲಹಳ್ಳಿ, ಕೋನಪಲ್ಲಿ, ಕೋರ್ಲಪರ್ತಿ, ಕೋಟಗಲ್, ಎಂ. ಗೊಲ್ಲಹಳ್ಳಿ, ಮಸ್ತೇನಹಳ್ಳಿ, ಮಿಂಡಗಲ್, ಮಿತ್ತಹಳ್ಳಿ, ಮುರಗಮಲ್ಲ, ನಂದಿಗಾನಹಳ್ಳಿ, ಪೆದ್ದೂರು, ಪೆರುಮಾಚಲಹಳ್ಳಿ, ರಾಗುಟ್ಟಹಳ್ಳಿ, ಶೆಟ್ಟಿಹಳ್ಳಿ, ಉಪ್ಪರಪೇಟೆ, ಚಿಕ್ಕಬಳ್ಳಾಪುರ ತಾಲ್ಲೂಕಿನ ಅಡ್ಡಗಲ್, ಅಗಲಗುರ್ಕಿ, ಅಜ್ಜವಾರ, ಅಂಗರೇಖನಹಳ್ಳಿ, ಅವಲಗುರ್ಕಿ, ದಿಬ್ಬೂರು, ದೊಡ್ಡಪೈಲಗುರ್ಕಿ, ಗೊಲ್ಲಹಳ್ಳಿ, ಹಾರೋಬಂಡೆ, ಹೊಸಹುಡ್ಯ, ಕಮ್ಮಗುಟ್ಟಹಳ್ಳಿ, ಮಂಚನಬಲೆ, ಪೆರೇಸಂದ್ರ, ಪೋಶೆಟ್ಟಿಹಳ್ಳಿ, ತಿಪ್ಪೇನಹಳ್ಳಿ ಬಾಗೇಪಲ್ಲಿ ತಾಲ್ಲೂಕಿನ ಬಿಳ್ಳೂರು, ಚಾಕವೇಲು, ಚೇಳೂರು, ದೇವರಗುಡಿಪಲ್ಲಿ, ಗಂಟಂವಾರಪಲ್ಲಿ, ಗೂರ್ತಪಲ್ಲಿ, ಗೂಳೂರು, ಜೂಲಪಾಳ್ಯ, ಕಾನಗಮಾಕಲಪಲ್ಲಿ, ಕೊತ್ತಕೋಟೆ, ಮಿಟ್ಟೆಮಿರಿ, ನಲ್ಲಗುಟ್ಟಪಲ್ಲಿ, ನಲ್ಲಪ್ಪರೆಡ್ಡಿಪಲ್ಲಿ, ನಾರೆಮುದ್ದೇಪಲ್ಲಿ, ಪಾಳ್ಯಕೆರೆ, ಪರಗೋಡು, ಪಾತಪಾಳ್ಯ, ಪುಲಿಗಲ್, ರಾಚ್ಚೇರವು, ಸೋಮನಾಥಪುರ, ತೋಳ್ಳಪಲ್ಲಿ, ಯಲ್ಲಂಪಲ್ಲಿಯಲ್ಲಿ ಅನಕ್ಷರಸ್ಥ ಸದಸ್ಯರು ಇದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ, ಬಶೆಟ್ಟಿಹಳ್ಳಿ, ಚಿಮಂಗಲ, ದೇವರಮಳ್ಳೂರು, ದಿಬ್ಬೂರಹಳ್ಳಿ, ದೊಡ್ಡತೇಕಹಳ್ಳಿ, ಹಂಡಿಗನಾಳ, ಕುಂಬಿಗಾನಹಳ್ಳಿ, ಮೇಲೂರು, ನಾಗಮಂಗಲ, ಎಸ್. ದೇವಗಾನಹಳ್ಳಿ, ಸಾದಲಿ, ತಲಕಾಯಲಬೆಟ್ಟ, ತುಮ್ಮನಹಳ್ಳಿ, ತಿಮ್ಮಸಂದ್ರ ಗ್ರಾಮ ಪಂಚಾಯಿತಿಯಲ್ಲಿ ಅನಕ್ಷರಸ್ಥ ಸದಸ್ಯರು ಇದ್ದಾರೆ.
ಅನಕ್ಷರಸ್ಥ ಎಂದು ಪರಿಗಣಿಸಲ್ಪಟ್ಟ ಕೆಲವು ಸದಸ್ಯರಿಗೆ ಸಹಿ ಮಾಡಲು ತಿಳಿಯುತ್ತಿದೆ. ಆದರೆ, ಅಕ್ಷರಗಳನ್ನು ಓದಿ ಅರ್ಥೈಸಿಕೊಳ್ಳಲು, ಬರೆಯಲು ತಿಳಿಯುತ್ತಿಲ್ಲ. ಈ ಕಾರಣಕ್ಕೆ ಅವರನ್ನು ಅನಕ್ಷರಸ್ಥ ಎಂದು ಪರಿಗಣಿಸಲಾಗುತ್ತಿದೆ.
ಬೋಧಕರ ಗುರುತು: ಒಬ್ಬ ಅನಕ್ಷರಸ್ಥ ಗ್ರಾಮ ಪಂಚಾಯಿತಿ ಸದಸ್ಯರಿಗೆ ಒಬ್ಬ ಬೋಧಕರನ್ನು ಗುರುತಿಸಲಾಗುತ್ತದೆ. ಹೀಗೆ ಗುರುತಿಸುವ ಬೋಧಕರು ಅನಕ್ಷರಸ್ಥ ಪಂಚಾಯಿತಿ ಸದಸ್ಯರು ವಾಸಿಸುತ್ತಿರುವ ಗ್ರಾಮದ ನಿವಾಸಿ ಆಗಿರಬೇಕು. ಕನಿಷ್ಠ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು. ಸರಳ ಓದು, ಬರಹ, ಲೆಕ್ಕ ಕಲಿಸಲು ಸಮರ್ಥರಾಗಿ ಇರಬೇಕು ಎಂದು ಅನಕ್ಷರಸ್ಥ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಕ್ರಿಯಾತ್ಮಕ ಸಾಕ್ಷರತಾ ಕಾರ್ಯಕ್ರಮ ಅನುಷ್ಠಾನ ಕುರಿತ ಆದೇಶದಲ್ಲಿ ತಿಳಿಸಲಾಗಿದೆ.
ಸಂಜೀವಿನಿ ಒಕ್ಕೂಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ, ಆರ್ಥಿಕ ಸಾಕ್ಷರತಾ ಸಂಪನ್ಮೂಲ ವ್ಯಕ್ತಿ, ನರೇಗಾ ಗ್ರಾಮ ಸಂಪನ್ಮೂಲ ವ್ಯಕ್ತಿ, ಸಾಕ್ಷರತಾ ಪ್ರೇರಕರು, ಗ್ರಂಥಪಾಲಕರು, ವಯಸ್ಕರ ಕಲಿಕೆ ಬೋಧನೆಯಲ್ಲಿ ಅನುಭವವುಳ್ಳ ಸ್ವಯಂಸೇವಕರು, ನಿವೃತ್ತ ಶಿಕ್ಷಕರು, ಕಲಿಕೆ ಬೋಧನೆಯಲ್ಲಿ ಆಸಕ್ತ ನಿವೃತ್ತ ನೌಕರರರನ್ನು ಪಂಚಾಯಿತಿ ಸದಸ್ಯರಿಗೆ ಬೋಧಿಸಲು ನೇಮಿಸಲಾಗುತ್ತಿದೆ.
ಕೆಲವು ಪಂಚಾಯಿತಿಗಳಲ್ಲಿ ಮೂರ್ನಾಲ್ಕು ಮಂದಿ ಅನಕ್ಷರಸ್ಥ ಸದಸ್ಯರು ಇದ್ದಾರೆ, ಕೆಲವು ಪಂಚಾಯಿತಿಗಳಲ್ಲಿ ಒಬ್ಬರು ಅನಕ್ಷರಸ್ಥ ಸದಸ್ಯರು ಇದ್ದಾರೆ.
ಚಿಂತಾಮಣಿ ತಾಲ್ಲೂಕಿನಲ್ಲಿ 91 ಮಂದಿ ಅನಕ್ಷರಸ್ಥ ಸದಸ್ಯರು ಸದಸ್ಯರು ವಾಸಿಸುವ ಗ್ರಾಮದಲ್ಲಿಯೇ ಬೋಧನೆಗೆ ಅವಕಾಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.