ADVERTISEMENT

ಶೇ 40 ಕಮಿಷನ್: ಜಾಗೃತ ಕರ್ನಾಟಕದಿಂದ ಸಭೆ ಇಂದು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 2:59 IST
Last Updated 22 ಏಪ್ರಿಲ್ 2022, 2:59 IST

ಚಿಕ್ಕಬಳ್ಳಾಪುರ: ‘ಜಾಗೃತ ಕರ್ನಾಟಕ ಸಂಘಟನೆ’ಯು ಶೇ 40 ಕಮಿಷನ್ ಮತ್ತು ಕರ್ನಾಟಕದಿಂದ ಭ್ರಷ್ಟಾಚಾರವನ್ನು ತೊಲಗಿಸಿ, ನಾಡನ್ನು ಸಮೃದ್ಧಗೊಳಿಸುವತ್ತ ಸಾಗಲು ಹಕ್ಕೊತ್ತಾಯ ಮಂಡನೆ ಮತ್ತು ಜಾಗೃತಿ ಕಾರ್ಯಕ್ರಮವನ್ನುರಾಜ್ಯದಾದ್ಯಂತ ಹಮ್ಮಿಕೊಳ್ಳುತ್ತಿದೆ.

ಈ ಭಾಗವಾಗಿ ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಶುಕ್ರವಾರ (ಏ.22) ಬೆಳಿಗ್ಗೆ 10.30ಕ್ಕೆ ಸಂವಾದ ಹಮ್ಮಿಕೊಂಡಿದೆ.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಚಿಂತಾಮಣಿಯ ದಲಿತ ಮುಖಂಡ ಎನ್. ಮುನಿಸ್ವಾಮಿ, ಬಾಗೇಪಲ್ಲಿಯ ವೈದ್ಯ ಡಾ.ಅನಿಲ್ ಕುಮಾರ್ ಭಾಷಣ ಮಾಡುವರು. ಜಾಗೃತ ಕರ್ನಾಟಕ ಸಂಘಟನೆಯ ಡಾ.ಎಚ್.ವಿ. ವಾಸು ಹಕ್ಕೊತ್ತಾಯ ಮಂಡಿಸುವರು. ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯರೆಡ್ಡಿ ಅಧ್ಯಕ್ಷತೆವಹಿಸುವರು. ಜಾಗೃತ ಕರ್ನಾಟಕ ಸಂಘಟನೆಯ ರಾಜಶೇಖರ ಅಕ್ಕಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ADVERTISEMENT

ಗುತ್ತಿಗೆದಾರರ ಸಂಘ ಅಧ್ಯಕ್ಷ ಕೆಂಪಣ್ಣ ಮತ್ತು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಇತ್ತೀಚೆಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಇಂತಹ ಹೊತ್ತಿನಲ್ಲಿ ಚಿಕ್ಕಬಳ್ಳಾಪುರದಲ್ಲಿ ಸಭೆ ನಡೆಸುತ್ತಿರುವುದು ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.