ADVERTISEMENT

ನಂದಿ ಬೆಟ್ಟದಲ್ಲಿ ವಾರಾಂತ್ಯ ಕರ್ಫ್ಯೂ; ‍ಪ್ರವಾಸಿಗರು ವಾ‍ಪಸ್

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 20:22 IST
Last Updated 23 ಜನವರಿ 2022, 20:22 IST

ಚಿಕ್ಕಬಳ್ಳಾಪುರ: ರಾಜ್ಯದಾದ್ಯಂತ ವಾರಾಂತ್ಯದ ಕರ್ಫ್ಯೂ ರದ್ದಾಗಿದೆ. ಆದರೆ ಜಿಲ್ಲೆಯ ನಂದಿಗಿರಿಧಾಮದಲ್ಲಿ ನಿಷೇಧಾಜ್ಞೆ ಮುಂದುವರಿದಿದೆ. ಕೋವಿಡ್ ಸೋಂಕು ಹೆಚ್ಚುವ ಸಂಭವಿದೆ ಎಂದು ಎರಡು ತಿಂಗಳ ಹಿಂದೆಯೇ ಶುಕ್ರವಾರ ಸಂಜೆ 6ರಿಂದ
ಸೋಮವಾರ ಬೆಳಿಗ್ಗೆ 6ರವರೆಗೆನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ನಂತರ ರಾಜ್ಯದ ಎಲ್ಲೆಡೆಯೂ ವಾರಾಂತ್ಯದ ನಿಷೇಧಾಜ್ಞೆ ಜಾರಿಯಾಯಿತು. ಈಗ ಈ ನಿಷೇಧಾಜ್ಞೆ ತೆರವಾಗಿದೆ. ಆದರೆ ಕೋವಿಡ್ ಭಯದ ಕಾರಣ ಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಭಾನುವಾರ ಗಿರಿಧಾಮಕ್ಕೆ ಬಂದ ಪ್ರವಾಸಿ
ಗರನ್ನು ಪೊಲೀಸರು ವಾಪಸ್ ಕಳುಹಿಸಿದರು.

ಪ್ರವೇಶದಲ್ಲಿಯೇ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.

ADVERTISEMENT

‘ಸಾಮಾನ್ಯವಾಗಿ ಇಲ್ಲಿಗೆ ಪ್ರವಾಸಕ್ಕೆಬರುತ್ತೇವೆ. ವಾರಾಂತ್ಯದ ಕರ್ಫ್ಯೂ ಇಲ್ಲ ಎಂದು ತಿಳಿದು ಇಲ್ಲಿಗೆ ಬಂದಿದ್ದೆವು. ಆದರೆ ಇಲ್ಲಿ ನಿರ್ಬಂಧವಿದೆ. ಬೇಸರವಾಯಿತು. ಆದಷ್ಟು ಬೇಗಕರ್ಫ್ಯೂ ತೆರವಾಗಿ ನಂದಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಬೆಂಗಳೂರು ನಿವಾಸಿ ಸುಶಾಂತ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.