ADVERTISEMENT

ಗೌರಿಬಿದನೂರು: ದಲಿತ ಕಾಲೊನಿಗಳ ಕಡೆಗಣನೆ ಆರೋಪ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 14:25 IST
Last Updated 17 ಜೂನ್ 2024, 14:25 IST
ನಗರಸಭಾ ಸದಸ್ಯೆ ರೂಪ ಅನಂತರಾಜು ನಗರಸಭೆ ದಲಿತ ವಿರೋಧಿ ನೀತಿಯನ್ನು ವಿರೋಧಿಸಿದ್ದಾರೆ.
ನಗರಸಭಾ ಸದಸ್ಯೆ ರೂಪ ಅನಂತರಾಜು ನಗರಸಭೆ ದಲಿತ ವಿರೋಧಿ ನೀತಿಯನ್ನು ವಿರೋಧಿಸಿದ್ದಾರೆ.   

ಗೌರಿಬಿದನೂರು: ದಲಿತರು ಹೆಚ್ಚಾಗಿ ವಾಸಿಸುವ ವಾರ್ಡ್‌ಗಳಲ್ಲಿ ನಡೆಸಲು ಉದ್ದೇಶಿಸಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಕೈಬಿಟ್ಟಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಗರಸಭೆ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ರೂಪ ಅನಂತರಾಜು ಆಗ್ರಹಿಸಿದ್ದಾರೆ.

‘2022ರಲ್ಲಿ ನಾನು ನಗರಸಭೆ ಅಧ್ಯಕ್ಷೆಯಾಗಿದ್ದಾಗ ಅಂದಿನ ಶಾಸಕ ಹಾಗೂ ನಗರಸಭೆ ಎಲ್ಲ ಸದಸ್ಯರೊಂದಿಗೆ ಚರ್ಚಿಸಿ ಅಮೃತ ನಗರೋತ್ಥಾನ ಯೋಜನೆಯಡಿ ₹30ಕೋಟಿ ವೆಚ್ಚದ ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ಧಪಡಿಸಿ ನಗರ ಯೋಜನಾ ನಿರ್ದೇಶಕರಿಗೆ ಕಳುಹಿಸಿಕೊಡಲಾಗಿತ್ತು. 18ನೇ ವಾರ್ಡ್ ನೆಹರೂ ಕಾಲೊನಿ ರಸ್ತೆ ಅಭಿವೃದ್ಧಿಗೆ ₹40 ಲಕ್ಷ ಹಾಗೂ 25ನೇ ವಾರ್ಡ್ ಕಲ್ಲೂಡಿ ಅಭಿವೃದ್ಧಿಗೆ ₹45ಲಕ್ಷ ಅನುದಾನ ಒದಗಿಸಲು ಅಂದಿನ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು’ ಎಂದರು.

ಆದರೆ, ನಗರಸಭೆ ಅಧಿಕಾರಿಗಳು ಚಿತಾವಣೆ ನಡೆಸಿ ಆ ಕಾಮಗಾರಿಗಳನ್ನೇ ಕೈಬಿಟ್ಟಿದ್ದಾರೆ. ಆ ಮೂಲಕ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. 

ADVERTISEMENT

ಈ ಸಂಬಂಧ ಮುಖ್ಯಮಂತ್ರಿ, ಪೌರಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರು, ಪರಿಶಿಷ್ಟ ಜಾತಿ, ಪಂಗಡದ ನಿಗಮಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.