ADVERTISEMENT

ಮತಯಾಚನೆ: ಬಂಡಿಯೇರಿದ ಬಚ್ಚೇಗೌಡ

​ಪ್ರಜಾವಾಣಿ ವಾರ್ತೆ
Published 3 ಮೇ 2019, 13:46 IST
Last Updated 3 ಮೇ 2019, 13:46 IST
ಅಭ್ಯರ್ಥಿ ಬಚ್ಚೇಗೌಡ ಅವರು ಎತ್ತಿನ ಬಂಡಿಯೇರಿ ಮತಯಾಚನೆ ಮಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಬಿ.ಕೃಷ್ಣಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತ ಲಕ್ಷ್ಮೀ ಇದ್ದರು
ಅಭ್ಯರ್ಥಿ ಬಚ್ಚೇಗೌಡ ಅವರು ಎತ್ತಿನ ಬಂಡಿಯೇರಿ ಮತಯಾಚನೆ ಮಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಬಿ.ಕೃಷ್ಣಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತ ಲಕ್ಷ್ಮೀ ಇದ್ದರು   

ಹೆಸರಘಟ್ಟ: ಪದವಾಡಿದ ಗಾಯಕರು, ತಮಟೆ ತಾಳಕ್ಕೆ ನರ್ತಿಸಿದ ಕಾರ್ಯಕರ್ತರು, ಶೃಂಗಾರಗೊಂಡ ಎತ್ತುಗಳು, ಆರತಿ ಬೆಳಗಿ ಅಭ್ಯರ್ಥಿಯನ್ನು ಬರಮಾಡಿಕೊಂಡ ಮಹಿಳೆಯರು. ಇವೆಲ್ಲವು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಅವರು ಮತಯಾಚನೆಗೆ ಬಂದಾಗ ಮೇಳೈಸಿದವು.

ಜೋಡೆತ್ತಿನ ಬಂಡಿಯೇರಿದ ಅಭ್ಯರ್ಥಿ ಮತ್ತು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಜತೆಗೂಡಿ ಗ್ರಾಮದಲ್ಲಿ ಮತಯಾಚನೆ ಮಾಡಿದರು.

‘18 ಲಕ್ಷ ಮತದಾರರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿದ್ದಾರೆ. 3.70 ಲಕ್ಷ ಮತದಾರರು ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಇದ್ದಾರೆ. ಹೆಸರಘಟ್ಟ ಹೋಬಳಿಯಲ್ಲಿ 85 ಸಾವಿರ ಮತದಾರರಿದ್ದು, ಸ್ಥಳೀಯನಾದ ನನ್ನನ್ನು ನೀವು ಬೆಂಬಲಿಸಬೇಕು’ ಎಂದು ಹೇಳಿದರು.

ADVERTISEMENT

‘ವಿಶ್ವನಾಥ ಮತ್ತು ನಾನು ಜೋಡೆತ್ತುಗಳಾಗಿ ಪ್ರಗತಿಯ ಬಂಡಿ ಎಳೆಯುತ್ತೇವೆ’ ಎಂದರು.

ವಿಶ್ವನಾಥ್,‘ಮೋದಿ ಅವರು ಪ್ರಧಾನ ಮಂತ್ರಿಯಾದ ಮೇಲೆ ಉಗ್ರಗಾಮಿ ಚಟುವಟಿಕೆಗಳು ಜಮ್ಮು ಕಾಶ್ಮೀರಕ್ಕೆ ಸೀಮಿತವಾಗಿದೆ. ಈ ದೇಶವನ್ನು ರಕ್ಷಿಸುವ ಸಾರ್ಮರ್ಥ್ಯ ಮೋದಿ ಅವರಿಗೆ ಮಾತ್ರ ಇದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.