ಬಾಗೇಪಲ್ಲಿ: ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮದಲ್ಲಿ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಹಳೆಯ ಮನೆಗೆ ಹೊಸದಾಗಿ ನಿರ್ಮಿಸಲಾಗಿದ್ದ ಗೋಡೆಗಳು ಕುಸಿದುಬಿದ್ದಿದೆ.
ಕೂಲಿಕಾರ್ಮಿಕ ಲಕ್ಷ್ಮಣ್ಣ ಮತ್ತು ಲಕ್ಷ್ಮಿನರಸಮ್ಮ ಎಂಬುವರಿಗೆ ಈ ಮನೆ ಸೇರಿದೆ. ದಂಪತಿ ಪ್ರತಿದಿನ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಗುರುವಾರ ಬೆಳಗ್ಗೆ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಮಗ ಮತ್ತು ಮಗಳು ಕಾಲೇಜಿಗೆ ಹೋಗಿದ್ದಾಗ ಮನೆಯ ಗೋಡೆಗಳು ಕುಸಿದುಬಿದ್ದಿವೆ ಎಂದು ತಿಳಿದುಬಂದಿದೆ.
ಗ್ರಾಮದಲ್ಲಿ ಇವರಿಗೆ ಹಳೆಯ ಮನೆ ಇತ್ತು. ಹಳೆ ಮನೆಯ ಪಕ್ಕದಲ್ಲೇ 4 ವರ್ಷಗಳ ಹಿಂದೆ ಹೊಸ ಕೊಠಡಿ ಕಟ್ಟಿಸಿದ್ದರು. ಗುರುವಾರ ಸಂಜೆ 4 ಗಂಟೆ ಮನೆ ಗೋಡೆಗಳು ನೆಲಕ್ಕೆ ಉರುಳಿ ಬಿದ್ದಿದೆ. ಇದರಿಂದ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯಲ್ಲಿ ಇದ್ದ ದವಸ ಧಾನ್ಯಗಳು ಹಾಗೂ ವಸ್ತುಗಳು ನಷ್ಟ ಉಂಟಾಗಿದೆ.
ಮನೆ ನಷ್ಟ ಪರಿಹಾರ ಕಲ್ಪಿಸಬೇಕು ಎಂದು ತಹಶೀಲ್ದಾರ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ದಂಪತಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.