ADVERTISEMENT

ಜ. 1ರಂದು ನಡೆಯುವ ಭೀಮ ಕೋರೆಗಾಂವ್ ವಿಜಯೋತ್ಸವಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 14:05 IST
Last Updated 13 ನವೆಂಬರ್ 2024, 14:05 IST
ಸಿದ್ದೇಶ್ ಕೆಸವೊಳಲು
ಸಿದ್ದೇಶ್ ಕೆಸವೊಳಲು   

ಮೂಡಿಗೆರೆ: ‘ತಾಲ್ಲೂಕಿನ ಎಲ್ಲಾ ರಾಜಕೀಯ ಪಕ್ಷಗಳು, ಪ್ರಗತಿಪರ ಸಂಘಟನೆಗಳ ಮುಖಂಡರೆಲ್ಲರೂ ಸೇರಿ 2025ರ ಜ. 1ರಂದು ಭೀಮ ಕೋರೆಗಾಂವ್ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಭೀಮ ಕೋರೆಗಾಂವ್ ವಿಜಯೋತ್ಸವ ಸಮಿತಿ ಅಧ್ಯಕ್ಷ ಸಿದ್ದೇಶ್ ಕೆಸವೊಳಲು ಹೇಳಿದರು.

ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತದ ಇತಿಹಾಸದಲ್ಲೇ ಹೆಸರಾದ ಕದನವೊಂದಿದ್ದರೆ ಅದು ಭೀಮ ಕೋರೆಗಾಂವ್ ಯುದ್ಧ. 1818ರಲ್ಲಿ 28 ಸಾವಿರ ಮಂದಿಯ ವಿರುದ್ಧ 500 ಮಂದಿ ಮಹರ್ ಸೈನಿಕರು ನಿರಂತರ 12ಗಂಟೆ ಹೋರಾಟ ನಡೆಸಿ ಗೆಲುವು ಸಾಧಿಸಿದ ಯುದ್ಧವಾಗಿದೆ. ಇದು ಕೇವಲ ದಲಿತ ಜನಾಂಗ ಮಾತ್ರವಲ್ಲ ಎಲ್ಲಾ ಶೋಷಿತರ ವಿಮೋಚನೆಗಾಗಿ, ಶಿಕ್ಷಣ, ಸ್ವಾಭಿಮಾನ, ಸಮಾನತೆಗಾಗಿ ಹೋರಾಟ ನಡೆಸಿದ ಯುದ್ಧದ ಬಗ್ಗೆ ಎಲ್ಲರೂ ತಿಳಿದುಕೊಳ್ಳುವ ಅವಶ್ಯಕತೆ ಇದೆ’ ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹೊಸ್ಕೆರೆ ರಮೇಶ್ ಮಾತನಾಡಿ, ‘ಭೀಮ ಕೋರೆಗಾಂವ್ ವಿಜಯೋತ್ಸವವನ್ನು ಇಡೀ ದೇಶಾದ್ಯಂತ ಆಚರಣೆ ಮಾಡಲಾಗುತ್ತಿದೆ. ಹಾಗಾಗಿ ಮೂಡಿಗೆರೆಯಲ್ಲಿಯೂ ಕೂಡ ಈ ಬಾರಿ 5 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಎಲ್ಲಾ ಪಕ್ಷ, ಪ್ರಗತಿಪರ ಸಂಘಟನೆಗಳ ಮುಖಂಡರು ಸೇರಿ ಭೀಮ ಕೋರೆಗಾಂವ್ ವಿಜಯೋತ್ಸವ ಆಚರಿಸಲು ಈಗಾಗಲೇ ಮೂರು ಸಭೆಗಳನ್ನು ನಡೆಸಲಾಗಿದೆ. ಕಾರ್ಯಕ್ರಮಕ್ಕೆ ಉತ್ತಮ ವಾಗ್ಮಿಗಳನ್ನು ಕರೆಸಿ ಉಪನ್ಯಾಸ ನೀಡಲಾಗುವುದು’ ಎಂದರು.

ADVERTISEMENT

ಕಾರ್ಯದರ್ಶಿ ಬಕ್ಕಿ ಕುಮಾರ್, ಮುಖಂಡರಾದ ಸುಧೀರ್ ಚಕ್ರಮಣಿ, ಎಲ್.ಬಿ.ರಮೇಶ್, ಬಿ.ಎಂ.ಶಂಕರ್, ಬಕ್ಕಿ ಮಂಜು, ರತನ್ ಊರುಬಗೆ, ನಾಗೇಶ್, ಯಡ್ದಾಳ್ ಅಭಿಜಿತ್, ಸುರೇಶ್ ಹೆಸಗಲ್, ರವಿ ಹೆಸಗಲ್, ಸುನಿಲ್ ಭೈರಾಪುರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.