ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭೆ ಚುನಾವಣೆಯ ಉಪ ಚುನಾವಣೆಯಲ್ಲಿ ಶೇ 86.84ರಷ್ಟು ಮತದಾನವಾಗಿದೆ.
ಕ್ಷೇತ್ರದಲ್ಲಿ 99,449 ಪುರುಷ, 1,00,749 ಮಹಿಳೆ ಮತ್ತು 22 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,00,220 ಮತದಾರರಿದ್ದಾರೆ. ಈ ಪೈಕಿ 87,732 ಪುರುಷರು, 86,135 ಮಹಿಳೆಯರು, ಮೂರು ತೃತೀಯ ಲಿಂಗಿಗಳು ಸೇರಿದಂತೆ 1,73,870 ಮತದಾರರು ಮತ ಚಲಾಯಿಸಿದ್ದಾರೆ. ಮತದಾರರಲ್ಲಿ ಶೇ88.22 ರಷ್ಟು ಪುರುಷರು, ಶೇ85.49ರಷ್ಟು ಮಹಿಳೆಯರು ಮತ ಚಲಾಯಿಸಿದ್ದಾರೆ.
2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಶೇ 88.6ರಷ್ಟು ಮತದಾನವಾಗಿತ್ತು. ಕ್ಷೇತ್ರ ವ್ಯಾಪ್ತಿಯಲ್ಲಿದ್ದ 1,95,808 ಮತದಾರರ ಪೈಕಿ 98,056 ಪುರುಷರು, 97,728 ಮಹಿಳೆಯರು ಸೇರಿದಂತೆ 1,72,753 (ಶೇ88.6) ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.