ADVERTISEMENT

ಚೇಳೂರು– ಚಿಲಕಲನೇರ್ಪು ರಸ್ತೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 15:19 IST
Last Updated 22 ಸೆಪ್ಟೆಂಬರ್ 2024, 15:19 IST
ಚೇಳೂರು-ಚಿಲಕಲನೇರ್ಪು ರಸ್ತೆಯನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಉದ್ಘಾಟಿಸಿದರು
ಚೇಳೂರು-ಚಿಲಕಲನೇರ್ಪು ರಸ್ತೆಯನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಉದ್ಘಾಟಿಸಿದರು   

ಚೇಳೂರು: ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್‌ಎಚ್‌ಡಿಪಿ) ಅಡಿಯಲ್ಲಿ ₹20 ಕೋಟಿ ಅನುದಾನದಲ್ಲಿ ಚೇಳೂರಿನ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಮತ್ತು ಭೂಮಿಪೂಜೆಯನ್ನು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಭಾನುವಾರ ನೆರವೇರಿಸಿದರು.

‘ಬಾಗೇಪಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿನ ಜನರು ಗ್ರಾಮೀಣ ಪ್ರದೇಶದಲ್ಲಿನ ಹದಗೆಟ್ಟಿರುವ ರಸ್ತೆಗಳ ಬಗ್ಗೆ ತಿಳಿಸಿದ್ದರು. ಮುಂದಿನ ಆರು ತಿಂಗಳೊಳಗೆ ಚೇಳೂರು ತಾಲ್ಲೂಕಿನಲ್ಲಿ ರಸ್ತೆಗಳು ಟಾರ್ ರಸ್ತೆಗಳಾಗಿ ಕಾಣುತ್ತವೆ. ತಾಲ್ಲೂಕಿಗೆ ಮುಂದಿನ ವರ್ಷದಲ್ಲಿ ಪ್ರಜಾಸೌಧ ಮಂಜೂರಾತಿ ಮಾಡಿಸಿಕೊಡಿಸಲು ಮುಖ್ಯಮಂತ್ರಿ ಆಶ್ವಾಸನೆ ನೀಡಿದ್ದಾರೆ’ ಎಂದರು.

ಚೇಳೂರಿನಿಂದ-ಚಿಲಕಲನೇರ್ಪು ತನಕ ₹10 ಕೋಟಿ ವೆಚ್ಚದ ರಸ್ತೆ ಉದ್ಘಾಟನೆ ಮಾಡಲಾಯಿತು. ₹10 ಕೋಟಿ ವೆಚ್ಚದ ಚೇಳೂರಿನಿಂದ-ಷೇರ್‌ಖಾನ್‍ಕೋಟೆ ರಸ್ತೆಗೆ ಭೂಮಿಪೂಜೆ ನೆರವೇರಿಸಲಾಯಿತು.

ADVERTISEMENT

‘ಚೇಳೂರು ತಾಲ್ಲೂಕಿನ 17 ಕಂದಾಯ ವೃತ್ತ ಗ್ರಾಮಗಳ ನೊಂದಣಿ ಸ್ಥಗಿತಗೊಂಡಿದ್ದು ಶೀಘ್ರವೇ ನೊಂದಣಿ ಪ್ರಕ್ರಿಯೆಗೆ ಅನುಕೂಲ ಮಾಡುತ್ತೇನೆ’ ಎಂದರು.

ತಹಶೀಲ್ದಾರ್ ಎ.ವಿ.ಶ್ರೀನಿವಾಸಲು ನಾಯುಡು, ಲೋಕೊಪಯೋಗಿ ಇಲಾಖೆ ಎ.ಇ.ಪ್ರದೀಪ್, ಈಶ್ವರ್ ಎಂ.ಎನ್, ಕೌಸ್ತರ್, ಕೆ.ವೆಂಕಟಾಚಲಪತಿ, ಪಿ.ಆರ್.ಚಲಂ, ರಾಮಾಂಜನೇಯರೆಡ್ಡಿ, ಕಡ್ಡೀಲು ವೆಂಕಟರಮಣ, ಕೆ.ಸಹದೇವರೆಡ್ಡಿ, ಜೆಎನ್ ಜಾಲಾರಿ, ಸುರೇಂದ್ರ, ಸಾಹುಕಾರ ಶ್ರೀನಿವಾಸ ರೆಡ್ಡಿ, ಕೆ.ಜಿ.ವೆಂಕಟರಮಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.