ಚಿಕ್ಕಬಳ್ಳಾಪುರ: ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಮತ ಚಲಾಯಿಸಲು ಬಿಜೆಪಿ ಸದಸ್ಯರನ್ನು ಸಂಸದ ಡಾ.ಕೆ.ಸುಧಾಕರ್- ಬಸ್‌ನಲ್ಲಿ ಕರೆ ತಂದರು. ಕಾಂಗ್ರೆಸ್ ಸದಸ್ಯರು ಮತ್ತೊಂದು ಬಸ್‌ನಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಆರ್.ಸೀತಾರಾಮ್ ಕರೆ ತಂದರು.
ಮೊದಲಿಗೆ ಕಾಂಗ್ರೆಸ್ ಸದಸ್ಯರು ನಗರಸಭೆ ಆವರಣ ಪ್ರವೇಶಿಸಿದರು. ಬಿಜೆಪಿ ಸದಸ್ಯರನ್ನು ಸುಧಾಕರ್ ಕರೆ ತಂದ ವೇಳೆ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೇಶವ ರೆಡ್ಡಿ ಹಾಗೂ ಪಕ್ಷದ ಮುಖಂಡರು ನಗರಸಭೆ ಆವರಣದಲ್ಲಿ ಇದ್ದರು.
ನಗರಸಭೆ ಗೇಟ್‌ನಲ್ಲಿಯೇ ಬಸ್ ನಿಲ್ಲಿಸಿದ ಸುಧಾಕರ್ ಪೊಲೀಸರು ಮತ್ತು ಚುನಾವಣಾ ಅಧಿಕಾರಿ ವಿರುದ್ಧ ಕಿಡಿಕಾರಿದರು. 200 ಮೀಟರ್ ನಿಷೇಧವಿದೆ. ಹೀಗಿದ್ದರೂ ಕಾಂಗ್ರೆಸ್ ಮುಖಂಡರನ್ನು ಹೇಗೆ ಒಳಗೆ ಬಿಟ್ಟಿರಿ ಎಂದರು.
ಚುನಾವಣಾ ಅಧಿಕಾರಿಯೂ ಆದ ಉಪವಿಭಾಗಾಧಿಕಾರಿ ಅವರಿಗೆ ಕರೆ ಮಾಡಿದರು. ನಗರಸಭೆ ಗೇಟ್‌ಗೆ ಬಂದ ಚುನಾವಣಾ ಅಧಿಕಾರಿ ಪೊಲೀಸ್ ರಕ್ಷಣೆಯಲ್ಲಿ ಬಿಜೆಪಿ ಸದಸ್ಯರನ್ನು ನಗರಸಭೆಯ ಒಳಗೆ ಕರೆದೊಯ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.