ADVERTISEMENT

ಶಿಡ್ಲಘಟ್ಟ: ₹600 ಗಡಿ ದಾಟಿದ ರೇಷ್ಮೆಗೂಡಿನ ಬೆಲೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 15:51 IST
Last Updated 9 ಸೆಪ್ಟೆಂಬರ್ 2024, 15:51 IST
ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿಯ ರೈತ ಜಯರಾಮ್ ಬೆಳೆದಿರುವ ರೇಷ್ಮೆ ಗೂಡು ಗರಿಷ್ಠ ದರ ₹608ಕ್ಕೆ ಮಾರಾಟವಾಗಿದ್ದರಿಂದ ರೇಷ್ಮೆ ಇಲಾಖೆಯಿಂದ ಪ್ರಮಾಣಪತ್ರವನ್ನು ಶಾಸಕ ಬಿ.ಎನ್.ರವಿಕುಮಾರ್ ನೀಡಿದರು
ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿಯ ರೈತ ಜಯರಾಮ್ ಬೆಳೆದಿರುವ ರೇಷ್ಮೆ ಗೂಡು ಗರಿಷ್ಠ ದರ ₹608ಕ್ಕೆ ಮಾರಾಟವಾಗಿದ್ದರಿಂದ ರೇಷ್ಮೆ ಇಲಾಖೆಯಿಂದ ಪ್ರಮಾಣಪತ್ರವನ್ನು ಶಾಸಕ ಬಿ.ಎನ್.ರವಿಕುಮಾರ್ ನೀಡಿದರು   

ಶಿಡ್ಲಘಟ್ಟ: ವಾತಾವರಣದ ಏರುಪೇರು ನಡುವೆ ರೇಷ್ಮೆ ಗೂಡಿನ ಬೆಲೆ ₹600ರ ಗಡಿ ದಾಟಿದ್ದು, ರೇಷ್ಮೆಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಸೋಮವಾರ ಮಳಮಾಚನಹಳ್ಳಿಯ ರೈತ ಜಯರಾಮ್ ಬೆಳೆದಿರುವ ರೇಷ್ಮೆಗೂಡು ₹608ಕ್ಕೆ ಮಾರಾಟವಾಗಿದೆ.

ಕಳೆದ ಜುಲೈನಲ್ಲಿ ₹350ರ ಆಸುಪಾಸಿನಲ್ಲಿದ್ದ ಬೆಲೆ ಈಗ ಸರಾಸರಿ ₹550ಗೆ ಮಾರಾಟವಾಗುತ್ತಿದೆ. ಇದರಿಂದ ರೇಷ್ಮೆಹುಳುವಿನ ಸಾಕಾಣಿಕೆಗಾಗಿ ರೇಷ್ಮೆ ಕೃಷಿಕರು ಉತ್ಸಾಹಿತರಾಗಿದ್ದಾರೆ.

ಸಾಮಾನ್ಯವಾಗಿ ಗೂಡಿನ ಬೆಲೆ ₹400ರ ಮೇಲೆ ಹರಾಜಾಗುತ್ತದೆ. ಆದರೆ, ರೇಷ್ಮೆ ಗೂಡಿನ ಗುಣಮಟ್ಟ ಹಾಗೂ ಮಾರುಕಟ್ಟೆಗೆ ಆವಕವಾಗುತ್ತಿರುವ ಗೂಡಿನ ಪ್ರಮಾಣ ಕಡಿಮೆಯಾಗಿರುವುದರಿಂದ ರೇಷ್ಮೆ ಬೆಳೆಗಾರರು ಉಲ್ಲಸಿತರಾಗಿದ್ದಾರೆ. ಹೀಗಾಗಿ ಗೂಡಿನ ಬೆಲೆ ₹600ರ ಗಡಿ ದಾಟಿದೆ ಎಂದು ರೇಷ್ಮೆಗೂಡು ಮಾರುಕಟ್ಟೆಯ ಸಹಾಯಕ ನಿರ್ದೇಶಕ ತಿಮ್ಮರಾಜು ತಿಳಿಸಿದರು.

ADVERTISEMENT

ರೇಷ್ಮೆಗೆ ಉತ್ತಮ ಬೆಲೆ ಸಿಗದೆ ಹಲವು ರೈತರು ರೇಷ್ಮೆ ಕೃಷಿಯಿಂದ ವಿಮುಖರಾಗಿದ್ದಾರೆ. ಈಗ ಉತ್ತಮ ಬೆಲೆ ಸಿಗುತ್ತಿರುವುದರಿಂದ ಮತ್ತೆ ರೇಷ್ಮೆ ಕೃಷಿಗೆ ಮುಂದಾಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.