ADVERTISEMENT

ಮುನಿರತ್ನಗೆ ಟಿಕೆಟ್ ನೀಡಿ ಕಾಂಗ್ರೆಸ್ ಕೂಡ ತಪ್ಪು ಮಾಡಿತ್ತು: ಸಚಿವ ಸುಧಾಕರ್

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 14:28 IST
Last Updated 15 ಸೆಪ್ಟೆಂಬರ್ 2024, 14:28 IST
<div class="paragraphs"><p>ಸಚಿವ ಡಾ.ಎಂ.ಸಿ.ಸುಧಾಕರ್</p></div>

ಸಚಿವ ಡಾ.ಎಂ.ಸಿ.ಸುಧಾಕರ್

   

ಚಿಕ್ಕಬಳ್ಳಾಪುರ: ‘ಆಡಿಯೊ ಮೂಲಕ ಶಾಸಕ ಮುನಿರತ್ನ ನಿಜ ಸ್ವರೂಪ ಬಯಲಾಗಿದೆ. ಗುತ್ತಿಗೆದಾರರಾಗಿದ್ದ ವೇಳೆ ಬಿಬಿಎಂಪಿ ದಾಖಲೆಗಳನ್ನೇ ಸುಟ್ಟು ಹಾಕಿದ್ದರು. ಈ ಹಿಂದೆ ನಮ್ಮ ಪಕ್ಷದವರು ಸಹ ಟಿಕೆಟ್ ಕೊಟ್ಟು ತಪ್ಪು ಮಾಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗರನ್ನು ಮತ್ತು ದಲಿತರನ್ನು ನಿಂದಿಸಿದ್ದಾರೆ. ನಾಗರಿಕ ಸಮಾಜದಲ್ಲಿ ಯಾರೂ ಆ ರೀತಿ ಮಾತನಾಡುವುದು ಸರಿಯಲ್ಲ. ಈ ರೀತಿ ಮಾತನಾಡಿದ ಸಂದರ್ಭದಲ್ಲಿ ಯಾರೇ ಆದರೂ ದೂರು ದಾಖಲಿಸಬಹುದು. ಕಾನೂನು ಪ್ರಕಾರ ಬಂಧಿಸಲಾಗಿದೆ ಎಂದರು. 

ADVERTISEMENT

‘ಬಂಧನ ರಾಜಕೀಯ ಪ್ರೇರಿತ ಎಂದು ಹೇಳುತ್ತಾರೆ. ಆದರೆ ಅವರು ನಡೆದು ಬಂದ ದಾರಿ ಒಳ್ಳೆಯ ರೀತಿಯಲ್ಲಿ ಇಲ್ಲ. ನಮ್ಮ ಪಕ್ಷದವರು ಟಿಕೆಟ್ ಕೊಟ್ಟು ತಪ್ಪು ಮಾಡಿದ್ದರೆ, ಬಿಜೆಪಿಯವರು ತಲೆ ಮೇಲೆ ಇಟ್ಟುಕೊಂಡು ಸಚಿವರನ್ನಾಗಿ ಮಾಡಿದರು. ಅವರು ಬೇರೆ ರೀತಿಯಲ್ಲಿ ಬೆಳೆಯಲು ಕಾರಣರಾದರು’ ಎಂದು ದೂರಿದರು. 

ಆರ್.ಅಶೋಕ ಅವರು ವಿರೋಧ ಪಕ್ಷದ ನಾಯಕರಾಗಿ ಅವರ ಪಕ್ಷದ ಶಾಸಕರನ್ನು ಸರ್ಮಥನೆ ಮಾಡಿಕೊಳ್ಳುವುದು ಸಹಜ. ಆದರೆ ಅಶೋಕ ತಾವು ಒಕ್ಕಲಿಗರು ಹೌದು ಅಥವಾ ಅಲ್ಲ ಎಂದು ಹೇಳಲಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.