ADVERTISEMENT

ಗ್ಯಾರಂಟಿಗಳಿಗೆ ಪರಿಶಿಷ್ಟರ ‘ನಿಧಿ’: ಮೂರೂ ಪಕ್ಷಗಳಿಂದ ದಲಿತರಿಗೆ ಅನ್ಯಾಯ: ಚೇತನ್

ಮುಡಾ ಹಗರಣವು ಸಿದ್ದರಾಮಯ್ಯಗೆ ಕಪ್ಪು ಚುಕ್ಕಿ ಎಂದು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 6:58 IST
Last Updated 15 ಜುಲೈ 2024, 6:58 IST
ನಟ ಚೇತನ್
ನಟ ಚೇತನ್   

ಚಿಕ್ಕಬಳ್ಳಾಪುರ: ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ನಟ ಚೇತನ್ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಿಂದ ದಲಿತರಿಗೆ ನ್ಯಾಯ ಸಿಕ್ಕಿಲ್ಲ. ಮೂರು ಪಕ್ಷಗಳು ಅನ್ಯಾಯ ಮಾಡಿವೆ ಎಂದು ದೂರಿದರು.

ಈ ಹಣ ಮೀಸಲಿಟ್ಟಿರುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ. ಆದರೆ, ಗ್ಯಾರಂಟಿಗಳಿಗೆ ಬಳಸುವ ಮೂಲಕ ಸಿದ್ದರಾಮಯ್ಯ ಸರ್ಕಾರ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ವಿರುದ್ಧವಿದೆ ಎಂದರು.

ADVERTISEMENT

ಲಿಂಗಾಯತರಿಗೆ ಬಿಜೆಪಿ, ಒಕ್ಕಲಿಗರಿಗೆ ಜೆಡಿಎಸ್ ಮತ್ತು ಮುಸ್ಲಿಮರಿಗೆ ಕಾಂಗ್ರೆಸ್ ಎನ್ನುವ ಸ್ಥಿತಿ ಇದೆ. ಆದರೆ, ದಲಿತರಿಗೆ ಈ ಪಕ್ಷಗಳು ನ್ಯಾಯ ಒದಗಿಸಿಲ್ಲ ಎಂದರು.

ಈ ಸರ್ಕಾರ ಬಂದ ನಂತರ ಹಗರಣದ ಮೇಲೆ ಹಗರಣಗಳು ನಡೆಯುತ್ತಿವೆ. ಜೈಲಿಗೆ ಹೋಗಿ ಬಂದಿದ್ದ ನಾಗೇಂದ್ರ ಪರಿಶಿಷ್ಟ ಕಲ್ಯಾಣದ ಸಚಿವರಾಗುತ್ತಾರೆ. ಸರ್ಕಾರ ಈ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದರು.

ಮುಡಾ ಹಗರಣವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಚುಕ್ಕಿ.‌ ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಯಾವುದೇ ಪಕ್ಷದ ರಾಜಕೀಯ ನಾಯಕರು ಭಾಗಿ ಆಗಿದ್ದರೂ ಕ್ರಮವಹಿಸಬೇಕು ಎಂದರು.

ವಿಧಾನಸೌಧ ಮುಂಭಾಗ ಭುವನೇಶ್ವರಿ ಮೂರ್ತಿ ಸ್ಥಾಪನೆಗೆ ಭೂಮಿ ಪೂಜೆ ಮಾಡಿದ್ದಾರೆ. ಇದು ಮೌಢ್ಯದ ಪರಮಾವಧಿ. ಪ್ರತಿಮೆ ರಾಜಕೀಯ ಬಿಟ್ಟು ಕನ್ನಡಿಗರಿಗೆ ಉದ್ಯೋಗ, ಬೆಳವಣಿಗೆಗಳ ಬಗ್ಗೆ ನಿಯಮಗಳನ್ನು ರೂಪಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.