ADVERTISEMENT

ಸಿಗದ ಪರಿಹಾರ: ಎಸಿ ಕಚೇರಿ ವಾಹನ, ಪೀಠೋಪಕರಣ ಜಪ್ತಿಗೆ ನ್ಯಾಯಾಲಯ ಆದೇಶ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 7:25 IST
Last Updated 13 ನವೆಂಬರ್ 2024, 7:25 IST
   

ಚಿಕ್ಕಬಳ್ಳಾಪುರ: ರಸ್ತೆ ವಿಸ್ತರಣೆಗೆ ಜಾಗ ಕಳೆದುಕೊಂಡ ಮಾಲೀಕರಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಇಲ್ಲಿನ ಉಪವಿಭಾಧಿಕಾರಿ ಕಚೇರಿಯ ಚರಾಸ್ತಿ ಜಪ್ತಿಗೆ ನ್ಯಾಯಾಲಯವು ಆದೇಶಿಸಿದೆ.

ಈ ಅಂಗವಾಗಿ ಬುಧವಾರ ವರ್ತಕರು ನ್ಯಾಯಾಲಯದ ಸಿಬ್ಬಂದಿ ಜೊತೆಗೆ ಬಂದು ಎಸಿ ಕಚೇರಿಯ ಪೀಠೋಪಕರಣಗಳು, ಕಂಪ್ಯೂಟರ್‌ ಗಳು ಮತ್ತಿತರ ವಸ್ತುಗಳನ್ನು ಹೊರಗೆ ಇಟ್ಟರು.

2006ರಲ್ಲಿ ಬಾಗೇಪಲ್ಲಿ ಪಟ್ಟಣದ ನ್ಯಾಯಾಲಯದ ಬಳಿಯಿಂದ ನ್ಯಾಷನಲ್ ಕಾಲೇಜುವರೆಗಿನ ಡಿ.ವಿ.ಜಿ ರಸ್ತೆಯನ್ನು 100 ಅಡಿ ವಿಸ್ತರಿಸಲಾಗಿತ್ತು.

ADVERTISEMENT

ಸುಮಾರು 390 ಅಂಗಡಿಗಳು ಇಲ್ಲಿ ಇದ್ದವು. ಆಗ ಪರಿಹಾರ ರೂಪದಲ್ಲಿ ಚದುರ ಅಡಿಗೆ ₹ 280 ನಿಗದಿಪಡಿಸಿ ಮಾಲೀಕರಿಗೆ ನೀಡಲಾಗಿದೆ. ಆದರೆ ಈ ಪೈಕಿ 32 ವರ್ತಕರು ಈ ಪರಿಹಾರದ ಹಣ ಸಾಕಾಗುವುದಿಲ್ಲ ಎಂದು ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯದ ₹ ಚದುರ ಅಡಿಗೆ ₹ 850 ನಿಗದಿಪಡಿಸಿತ್ತು.

ಈ ಹಣವನ್ನೂ ನೀಡಿಲ್ಲ ಎಂದು ಒಂಬತ್ತು ವರ್ತಕರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು.

ಉಪವಿಭಾಗಧಿಕಾರಿ ಅವರ ಸರ್ಕಾರಿ ವಾಹನ ಸಮೇತ ಚರಾಸ್ತಿಯನ್ನು ಜಪ್ತಿ ಮಾಡಲು ನಗರದ ಹಿರಿಯ ಸಿವಿಲ್ ನ್ಯಾಯಾಲಯವು ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ಕುರ್ಚಿಗಳು, ಮೇಜು, ಕಂಪ್ಯೂಟರ್ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.