ADVERTISEMENT

ಚಿಕ್ಕಬಳ್ಳಾಪುರ | ಮನೆಯಿಂದಲೇ ಕೆಲಸ; ಕಮಿಷನ್ ಆಮಿಷ: ₹19 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 23:30 IST
Last Updated 16 ಜೂನ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿಕ್ಕಬಳ್ಳಾಪುರ: ಮನೆಯಿಂದಲೇ ಕೆಲಸ ಮಾಡಬಹುದು. ಉತ್ತಮ ಆದಾಯಗಳಿಸಬಹುದು ಎಂದು ನಂಬಿಸಿ ಶಿಡ್ಲಘಟ್ಟದ ವ್ಯಕ್ತಿಯೊಬ್ಬರಿಗೆ‌ ಆನ್‌ಲೈನ್ ವಂಚಕರು ₹ 19 ಲಕ್ಷ ವಂಚಿಸಿದ್ದಾರೆ. ಈ ಸಂಬಂಧ ಅವರು ನಗರದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. 

ಕರೆ ಮಾಡಿದ ವ್ಯಕ್ತಿಯೊಬ್ಬರು ಟಿಕೆಟ್ ಬುಕಿಂಗ್ ಕೆಲಸವನ್ನು ಮನೆಯಿಂದಲೇ ಮಾಡಿದರೆ ನಿಮಗೆ ಒಳ್ಳೆಯ ಕಮಿಷನ್ ಕೊಡುತ್ತೇವೆ ಎಂದರು. ನನ್ನ ಟೆಲಿಗ್ರಾಮ್ ಗ್ರೂಪ್‌ಗೆ ಸೇರಿಸಿದರು. ಲಕ್ಷ್ಮಣ್ ಎಂಬುವರು ಟಿಕೆಟ್ ಬುಕಿಂಗ್ ಬಗ್ಗೆ ಮಾರ್ಗದರ್ಶನ ನೀಡಿದರು.  ಉತ್ತಮ ಆದಾಯ ನೀಡುವುದಾಗಿ ನಂಬಿಸಿ. ಹಂತ ಹಂತವಾಗಿ ಹೂಡಿಕೆ ಮಾಡಿಸಿಕೊಂಡು ಆನ್ ಲೈನ್ ಮೂಲಕ ವಂಚಿಸಿದ್ದಾರೆ. ವಂಚಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ. 

ADVERTISEMENT

ಲಾಭದ ಆಸೆ: ₹20 ಲಕ್ಷ ವಂಚನೆ

ಚಿಂತಾಮಣಿ: ಸ್ಟಾಕ್ಸ್‌ನ್ನು ಕೊಂಡುಕೊಳ್ಳುವುದು ಮತ್ತು ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭ ಪಡೆಯಬಹುದು ಎಂದು ನಂಬಿಸಿರುವ ಸೈಬರ್ ವಂಚಕರು ₹20.5 ಲಕ್ಷ ವಂಚಿಸಿರುವುದಾಗಿ
ವ್ಯಕ್ತಿಯೊಬ್ಬರು ಸಿ.ಇ.ಎನ್.ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಿದ್ದಾರೆ.

ತಾಲ್ಲೂಕಿನ ಮುರುಗಮಲ್ಲ ಹೋಬಳಿಯ ಕೊತ್ತಪಲ್ಲಿ ಗ್ರಾಮದ ನಿವಾಸಿ ಆರ್.ಭಾಸ್ಕರ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡ ವ್ಯಕ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.