ಚೇಳೂರು: ತಾಲ್ಲೂಕಿನ ಕೊಂಡಿಕೊಂಡೆ ಗಂಗಮ್ಮ ಬೆಟ್ಟದ ಕೆಳಗಿನ ರಸ್ತೆ ತಿರುವನ್ನು ವಿಸ್ತರಣೆ ಮಾಡಿ ಪ್ರತಿನಿತ್ಯ ನಡೆಯುತ್ತಿರುವ ಅಪಘಾತಗಳಿಂದ ಅಮೂಲ್ಯ ಜೀವಗಳನ್ನು ಕಾಪಾಡಬೇಕು ಎಂದು ಕೊಂಡಿಕೊಂಡೆ ಮಜರಾ ಐದು ಗ್ರಾಮಗಳ ಜನರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಚೇಳೂರಿನಿಂದ ಬಾಗೇಪಲ್ಲಿಗೆ ಹೋಗುವ ಮುಖ್ಯರಸ್ತೆಯ ಷೇರ್‌ಖಾನ್ ಕೋಟೆ, ಪುಲ್ಲುಗಲ್ಲು ಮತ್ತು ಮೂಗಿರೆಡ್ಡಿಪಲ್ಲಿಯ ಹಲವು ಕಡೆ ಅವೈಜ್ಞಾನಿಕವಾಗಿ ರಸ್ತೆ ತಿರುವು ಇದೆ. ಇದರಿಂದ ದ್ವಿಚಕ್ರವಾಹನ ಸವಾರರು ಪ್ರಾಣ ಭೀತಿಯಿಂದ ಸಂಚರಿಸುವ ದುಃಸ್ಥಿತಿ ಎದುರಾಗಿದೆ.
ಒಂದು ವರ್ಷದ ಹಿಂದೆ ಈ ತಿರುವು ಮೂವರನ್ನು ಬಲಿ ತೆಗೆದುಕೊಂಡಿತ್ತು. ನಂತರದ ದಿನಗಳಲ್ಲಿ ಚಿಂತಾಮಣಿ ನಗರದ ದಂಪತಿ ಇಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಜೊತೆಗೆ ವಾರದ ಹಿಂದೆ ಗೊಟ್ಲಪಲ್ಲಿ ಗ್ರಾಮದ ಪಿಯು ವಿದ್ಯಾರ್ಥಿಯ ದ್ವಿಚಕ್ರವಾಹನಕ್ಕೆ ಟೆಂಪೊ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಈ ಎಲ್ಲಾ ಅಪಘಾತ ಕಂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಪಾಯದ ರಸ್ತೆ ತಿರುವು ಎಂದು ನಾಮಫಲಕ ಹಾಕಿದ್ದರು.
ಆದರೆ, ರಸ್ತೆ ತಿರುವಿನಲ್ಲಿ ಗಿಡಗಳು ಬೆಳೆದಿದ್ದು, ಎದುರುಗಡೆಯಿಂದ ಬರುವ ವಾಹನಗಳು ಕಾಣದೇ ಅಪಘಾತ ಸಂಭವಿಸುತ್ತಿವೆ. ಅತಿವೇಗವಾಗಿ ಬಂದು ಅಪಘಾತಗಳಾಗಿ ಮೃತಪಟ್ಟುತ್ತಿರುವುದು ಮತ್ತೊಂದುಕಾರಣವಾಗಿದೆ.
‘ಮುಖ್ಯರಸ್ತೆಯಲ್ಲಿ ಈ ತಿರುವು ಇದೆ. ಅಲ್ಲಿ ವಾಹನ ಸವಾರರಿಗೆ ಮುನ್ಸೂಚನೆ ನೀಡುವ ರಸ್ತೆಯ ಚಿಹ್ನೆಗಳನ್ನು ಹಾಕಿರಬೇಕು. ಜತೆಗೆ, ವಾಹನಗಳವೇಗಮಿತಿನಿಯಂತ್ರಿಸುವುದಕ್ಕೂಸೂಕ್ತಸುರಕ್ಷಾಕ್ರಮಅಳವಡಿಸಬೇಕು.ರಸ್ತೆವಿಸ್ತರಣೆಮಾಡಬೇಕು’ಎಂದುಮೂಗಿರೆಡ್ಡಿಪಲ್ಲಿ ನಿವಾಸಿ ವೆಂಕಟರವಣ ನಾಯ್ಕ್ ಒತ್ತಾಯಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.