ADVERTISEMENT

ಶಿಡ್ಲಘಟ್ಟ: ಕೇಶವಾರ ಕೆರೆಯಲ್ಲಿ ಹಕ್ಕಿಗಳ ಸಮ್ಮೇಳನ

ಡಿ.ಜಿ.ಮಲ್ಲಿಕಾರ್ಜುನ
Published 17 ಜೂನ್ 2024, 7:39 IST
Last Updated 17 ಜೂನ್ 2024, 7:39 IST
ಶಿಡ್ಲಘಟ್ಟದ ಬಳಿಯ ಕೇಶವಾರದ ಕೆರೆಗೆ ಅತಿಥಿಗಳಾಗಿ ಆಗಮಿಸಿರುವ ವಿವಿಧ ರೀತಿಯ ನೀರು ಹಕ್ಕಿಗಳು
ಶಿಡ್ಲಘಟ್ಟದ ಬಳಿಯ ಕೇಶವಾರದ ಕೆರೆಗೆ ಅತಿಥಿಗಳಾಗಿ ಆಗಮಿಸಿರುವ ವಿವಿಧ ರೀತಿಯ ನೀರು ಹಕ್ಕಿಗಳು   

ಶಿಡ್ಲಘಟ್ಟ: ಸಾಮಾನ್ಯವಾಗಿ ಚಳಿಗಾಲದಲ್ಲಿ ತಾಲ್ಲೂಕು ಹಾಗೂ ಸುತ್ತಮುತ್ತಲಿನ ಕೆರೆಗಳಿಗೆ ಅತಿಥಿಗಳಂತೆ ಹಲವು ರೀತಿಯ ಹಕ್ಕಿಗಳು ಆಗಮಿಸುವುದು ವಾಡಿಕೆ. ಆದರೆ ಇದೀಗ ಜೂನ್ ತಿಂಗಳಿನಲ್ಲಿಯೇ ಈ ಅತಿಥಿಗಳ ಆಗಮನವಾಗಿದೆ.

ಶಿಡ್ಲಘಟ್ಟದಿಂದ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಹೊಸಹುಡ್ಯದ ಬಳಿ ಕೇಶವಾರದ ಕಡೆಗೆ ಹೋಗುವಾಗ ಸಿಗುವುದೇ ಕೇಶವಾರ ಕೆರೆ. ಸುತ್ತಮುತಲಿನ ಬಹುತೇಕ ಕೆರೆಗಳು ಒಣಗಿದ್ದರೆ, ಇಲ್ಲಿ ಮಾತ್ರ ಅಲ್ಲಲ್ಲಿ ಕುಂಟೆಗಳಂತೆ ನೀರು ನಿಂತಿದ್ದು, ಹಕ್ಕಿಗಳಿಗೆ ಯಥೇಚ್ಛವಾಗಿ ಆಹಾರ ಸಿಗುತ್ತಿವೆ. ಹಾಘಾಗಿ ಈ ಕೆರೆಯಲ್ಲಿನ ನೀರಿನ ಸೆಲೆಗಳ ಬಳಿ ವಿವಿಧ ರೀತಿಯ ದೊಡ್ಡ ಗಾತ್ರದ ನೀರು ಹಕ್ಕಿಗಳು ಕಂಡುಬಂದಿವೆ.

ಬೂದು ಬಣ್ಣದ ಹದ್ದಿಗಿಂತಲೂ ದೊಡ್ಡದಾದ ಚಮಚ ಹಕ್ಕಿ ಅಥವಾ ಸ್ಪೂನ್ ಬಿಲ್ಡ್ ಸ್ಟೋರ್ಕ್ ಮತ್ತು ಅಷ್ಟೇ ದೊಡ್ಡದಿರುವ ಹಳದಿಗೆಂಪು ಬಣ್ಣದ ದಾಸಕೊಕ್ಕರೆ ಅಥವಾ ಪೇಯಿಂಟೆಡ್ ಸ್ಟೋರ್ಕ್ ಹಕ್ಕಿಗಳು ಹಿಂಡು ಹಿಂಡಾಗಿ ಕೇಶವಾರ ಕೆರೆಗೆ ಬಂದಿಳಿದಿವೆ. ಇವುಗಳೊಂದಿಗೆ ಐಬಿಸ್, ಬೆಳ್ಳಕ್ಕಿಗಳು ಮತ್ತು ಕೊಕ್ಕರೆಗಳ ಗುಂಪೂ ಸೇರಿಕೊಂಡು ಕೆರೆಯು ಪುಟ್ಟ ರಂಗನತಿಟ್ಟಾಗಿದೆ.

ADVERTISEMENT

ಈ ಬಾರಿ ಮಳೆ ಕಡಿಮೆಯ್ದಾದರಿಂದ ಕೆರೆಯಲ್ಲಿ ನೀರು ಕಡಿಮೆ ಪ್ರಮಾಣದಲ್ಲಿದೆ. ಆದರೂ ಇರುವ ನೀರಿನಲ್ಲಿ ಸಿಗುವ ಮೀನು, ಏಡಿ, ಕಪ್ಪೆ, ಶಂಕದ ಹುಳುಗಳು ಮೊದಲಾದ ಜಲಚರಗಳನ್ನು ಈ ಹಕ್ಕಿಗಳು ಬೆನ್ನು ಗೂನು ಮಾಡಿಕೊಂಡು ತಾಳ್ಮೆಯಿಂದ ಕಾದು ಹಿಡಿದು ತಿನ್ನುತ್ತಿವೆ.

ದಾಸಕೊಕ್ಕರೆ ಅಥವಾ ಪೇಯಿಂಟೆಡ್ ಸ್ಟೋರ್ಕ್ ಹಕ್ಕಿಗಳು
 ಮತ್ಸಭೋಜನದಲ್ಲಿ ನಿರತವಾದ ಪೇಯಿಂಟೆಡ್ ಸ್ಟೋರ್ಕ್ ಹಕ್ಕಿ
ಐಬಿಸ್ ಹಕ್ಕಿಯ ಹಾರಾಟ
ಗ್ರೇ ಹೆರಾನ್ ಹಕ್ಕಿಯನ್ನು ಬೆನ್ನಟ್ಟಿರುವ ಮೆಟ್ಟುಗಾಲು ಹಕ್ಕಿ
ಮರದ ಮೇಲೆ ಕುಳಿತ ಪೇಯಿಂಟೆಡ್ ಸ್ಟೋರ್ಕ್ ಹಕ್ಕಿಗಳು
ಹಾರಾಟದಲ್ಲಿ ತೊಡಗಿರುವ ಪೇಯಿಂಟೆಡ್ ಸ್ಟೋರ್ಕ್ ಹಕ್ಕಿ
ಸ್ಪೂನ್ ಬಿಲ್ ಹಕ್ಕಿಗಳ ಹಾರಾಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.