ಚಿಂತಾಮಣಿ: ‘ಅಂಗವಿಕಲರು ಎಲ್ಲ ವರ್ಗದ ಜನರಂತೆ ಸ್ವಾಭಿಮಾನಿಗಳಾಗಿ ಬದುಕಬೇಕು. ಅವರು ಸಾಮಾನ್ಯ ಜನರಂತೆ ಬದುಕು ಕಟ್ಟಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವ ವಾತಾವರಣ ಮತ್ತು ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕು’ ಎಂದು ಕರ್ನಾಟಕ ವಿಕಲಚೇತನ ಸಂಘದ ಪ್ರಧಾನ ಕಾರ್ಯದರ್ಶಿ ಕಿರಣ್ ನಾಯಕ್ ತಿಳಿಸಿದರು.
ಅವರು ಮಂಗಳವಾರ ತಾಲ್ಲೂಕು ವಿಕಲಚೇತನರ ಸಂಘಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಅಂಗವಿಕಲರು ತಮ್ಮ ದೈಹಿಕ ಬೆಳವಣಿಗೆಯ ಬಗ್ಗೆ ಇರುವ ಕೀಳರಿಮೆ ತ್ಯಜಿಸಬೇಕು. ಅವರಿಗೆ ಯಾವುದೇ ರೀತಿಯ ಅನುಕಂಪ ಅಗತ್ಯವಿಲ್ಲ. ಅವರಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಸೌಲಭ್ಯ ನೀಡಬೇಕು. ಈ ಬಗ್ಗೆ ಮಾಹಿತಿ ಮತ್ತು ಜಾಗೃತಿ ಮೂಡಿಸಲು ಡಿ. 31ರಂದು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿಶ್ವ ವಿಕಲಚೇನರ ದಿನಾಚರಣೆ ಆಚರಿಸಲಾಗುವುದು ಎಂದು ತಿಳಿಸಿದರು.
ದಿನಾಚರಣೆಯಲ್ಲಿ ಸುಮಾರು 500 ಜನ ವಿಕಲಚೇನರು ಮತ್ತು ಅವರ ಕುಟುಂಬಸ್ಥರು ಭಾಗವಹಿಸುತ್ತಾರೆ ಎಂದು ತಿಳಿಸಿದರು.
ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳು: ನಾಗರಾಜ್ ಅಧ್ಯಕ್ಷ, ಕೆ.ಎನ್.ವೆಂಕಟರೆಡ್ಡಿ ಉಪಾಧ್ಯಕ್ಷ, ಎ.ಲಕ್ಷ್ಮಿದೇವಿ ಕಾರ್ಯದರ್ಶಿ, ಟಿ.ಆರ್.ಮಂಜುನಾಥ್ ಖಜಾಂಚಿ, ರೆಹಮತ್ ಬಿ ಮತ್ತು ಆರ್.ಎನ್ ಮಂಜುಳಾ, ಮಹಿಳಾ ಸಂಚಾಲಕಿಯರು,
ಎನ್. ರಂಗರಾಜು, ಪಿ.ಕೀರ್ತನಾ, ಕೆ.ಎ. ಮುನಿರಾಜಪ್ಪ, ವಿ.ಎನ್.ನಾಗೇಶ್, ಆರ್. ನಾಗರಾಜ್, ದಾದಾಫೀರ್, ವರುಣ್ ಕುಮಾರ್, ಎಲ್ಲರೂ ಸಂಚಾಲರು,ನಗರ ಘಟಕ: ಟಿ.ಚಂದ್ರ ಅಧ್ಯಕ್ಷ,ಟಿ.ಎಂ.ನಟರಾಜು ಉಪಾಧ್ಯಕ್ಷ, ನಸೀಬಾ ಕಾರ್ಯದರ್ಶಿ, ಗುರ್ನಾದ್ ಬೇಗಂ ಖಜಾಂಚಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.