ADVERTISEMENT

ಕನ್ನಡ ಸಿನಿಮಾ ಪ್ರೋತ್ಸಾಹಿಸಿ: ಡಾಲಿ ಧನಂಜಯ್

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 5:18 IST
Last Updated 12 ಜನವರಿ 2023, 5:18 IST
ಚಿಕ್ಕಬಳ್ಳಾಪುರ ಉತ್ಸವದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ನಟ ಡಾಲಿ ಧನಂಜಯ್, ತೆಲುಗು ನಟ ಅಲಿ ಹಾಗೂ ನಟಿಯರು ನೃತ್ಯ ಮಾಡಿದರು
ಚಿಕ್ಕಬಳ್ಳಾಪುರ ಉತ್ಸವದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ನಟ ಡಾಲಿ ಧನಂಜಯ್, ತೆಲುಗು ನಟ ಅಲಿ ಹಾಗೂ ನಟಿಯರು ನೃತ್ಯ ಮಾಡಿದರು   

ಚಿಕ್ಕಬಳ್ಳಾಪುರ: ‘ಎಲ್ಲರೂ ಕನ್ನಡ ಸಿನಿಮಾ ನೋಡಿ, ಕನ್ನಡ ಸಿನಿಮಾ ಪ್ರೋತ್ಸಾಹಿಸಿ’ ಎಂದು ನಟ ಡಾಲಿ ಧನಂಜಯ್ ತಿಳಿಸಿದರು.

ನಗರದಲ್ಲಿ ಬುಧವಾರ ರಾತ್ರಿ ಚಿಕ್ಕಬಳ್ಳಾಪುರ ಉತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‌ಉತ್ಸವಕ್ಕೆ ಕನ್ನಡ ಮತ್ತು ತೆಲುಗಿನಿಂದ ಕಲಾವಿದರು ಬಂದಿದ್ದಾರೆ. ಕನ್ನಡ ಸಿನಿಮಾಗಳನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ ಎಂದರು. ಧನಂಜಯ್ ವೇದಿಕೆಗೆ ಬರುತ್ತಿದ್ದಂತೆ ಡಾಲಿ ಡಾಲಿ ಎನ್ನುವ ಘೋಷಣೆಗಳು ಮೊಳಗಿದವು. ‘ಟಗರು’ ಸಿನಿಮಾದ ಡೈಲಾಗ್ ಹೇಳಿ, ‘ಟಗರು’, ‘ಬಡವ ರ‍್ಯಾಸ್ಕಲ್’ ಮತ್ತು ‘ಪುಷ್ಪ’ ಸಿನಿಮಾಗಳ ಹಾಡಿಗೆ ಹೆಜ್ಜೆಹಾಕಿ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳನ್ನು ರಂಜಿಸಿದರು. ತೆಲುಗು ನಟ ಅಲಿ ಮತ್ತಿತರರು ಈ ವೇಳೆ ಇದ್ದರು. ಸಂಜೆ ತೆಲುಗು ಹಾಡುಗಳ ಗಾಯನ ನಡೆಯಿತು.

ADVERTISEMENT

ಉತ್ಸವದ ಅಂಗವಾಗಿ ‘ಊರಹಬ್ಬ’ ಆಚರಿಸಲಾಯಿತು. ಗ್ರಾಮಗಳಲ್ಲಿ ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ, ತುಂಬಿದ ಕೆರೆಗಳಿಗೆ ಬಾಗಿನ ಸಮರ್ಪಣೆ ನಡೆಯಿತು. ಗ್ರಾಮದೇವರ ಪಲ್ಲಕ್ಕಿಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.

ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕುಸ್ತಿ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್ ಚಾಲನೆ ನೀಡಿದರು. ಸಚಿವರಾದ ಡಾ.ಕೆ.ಸುಧಾಕರ್, ಬಿ.ಸಿ.ಪಾಟೀಲ್, ಶಿವರಾಮ ಹೆಬ್ಬಾರ್ ವೇದಿಕೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.