ADVERTISEMENT

ಸರ್ವರಿಗೂ ಸ್ವಾತಂತ್ರ್ಯದ ಬಗ್ಗೆ ಅರಿವು ಮೂಡಿಸಬೇಕು: ಸಚಿವ ಡಾ.ಕೆ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 8:36 IST
Last Updated 12 ಮಾರ್ಚ್ 2021, 8:36 IST
   

ಚಿಕ್ಕಬಳ್ಳಾಪುರ: ಸರ್ವರಿಗೂ ಸ್ವಾತಂತ್ರ್ಯದ ಬಗ್ಗೆ ಅರಿವು ಮೂಡಿಸಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಅಮೃತ ಮಹೋತ್ಸವದಲ್ಲಿ ಮಾತನಾಡಿದ ಅವರು, 300 ವರ್ಷ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮ ನಡೆದಿದೆ. ಸಾವಿರಾರು ಹೋರಾಟಗಾರರು ಹುತಾತ್ಮರಾಗಿದ್ದಾರೆ ಎಂದರು.

ಪ್ರಧಾನಿ ಗುಜರಾತ್ ನಲ್ಲಿ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದರು. ನಮ್ಮ ರಾಜ್ಯದಲ್ಲಿ ವಿದುರಾಶ್ವತ್ಥದಲ್ಲಿ ಚಾಲನೆ ನೀಡಲಾಗಿದೆ. ಇದು ಐತಿಹಾಸಿಕ ಕಾರ್ಯಕ್ರಮ.

ಇಲ್ಲಿ 9 ಜನರ ಸಾವು ಆಗಿಲ್ಲ. 32 ಜನರ ಸಾವು ಆಗಿದೆ ಎಂದು ಸ್ವಾತಂತ್ರ್ಯ ನಂತರ ನಮ್ಮ ಸರ್ಕಾರ ನೇಮಿಸಿದ ಸತ್ಯ ಶೋಧನ ಸಮಿತಿ ತಿಳಿಸಿದೆ. ಈ ನೆಲ ಧಾರ್ಮಿಕ ಮತ್ತು ಐತಿಹಾಸಿಕ ನೆಲ. ಮತ್ತಷ್ಟು ಅಭಿವೃದ್ಧಿ ಆಗಬೇಕು. ಸಿಡಿಸಿ ಎನ್ನುವ ಸಮಿತಿ ಇಲ್ಲಿನ ಅಭಿವೃದ್ಧಿಗೆ ₹16 ಕೋಟಿಯ ಡಿಪಿಆರ್ ಸಲ್ಲಿಸಿದೆ. ಇದಕ್ಕೆ ಮುಖ್ಯಮಂತ್ರಿ ಅವರು ಅನುಮೋದನೆ ನೀಡಬೇಕು ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.