ADVERTISEMENT

ಬಾಗೇಪಲ್ಲಿ | ಭೂಮಿ ಕಂಪನ ಅನುಭವ: ಭಾರಿ ಶಬ್ದಕ್ಕೆ ಬೆಚ್ಚಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 15:31 IST
Last Updated 23 ಜೂನ್ 2024, 15:31 IST
ಬಾಗೇಪಲ್ಲಿ ತಾಲ್ಲೂಕಿನ ಆಗಟಮಡಕ ಗ್ರಾಮದಲ್ಲಿ ಉಂಟಾದ ಭೂಮಿಯ ಕಂಪನದ ಅನುಭವ, ಭಾರಿ ಶಬ್ದಕ್ಕೆ ಗ್ರಾಮಸ್ಥರು ಮನೆಗಳಿಂದ ಹೊರಗೆ ಬಂದಿರುವುದು
ಬಾಗೇಪಲ್ಲಿ ತಾಲ್ಲೂಕಿನ ಆಗಟಮಡಕ ಗ್ರಾಮದಲ್ಲಿ ಉಂಟಾದ ಭೂಮಿಯ ಕಂಪನದ ಅನುಭವ, ಭಾರಿ ಶಬ್ದಕ್ಕೆ ಗ್ರಾಮಸ್ಥರು ಮನೆಗಳಿಂದ ಹೊರಗೆ ಬಂದಿರುವುದು   

ಪಾತಪಾಳ್ಯ(ಬಾಗೇಪಲ್ಲಿ): ತಾಲ್ಲೂಕಿನ ಪಾತಪಾಳ್ಯ ಹೋಬಳಿಯ ಆಗಟಮಡಕ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ 7.5ಕ್ಕೆ ಕೆಲಕಾಲ ಭೂಮಿ ಕಂಪನದಿಂದ ಭಾರಿ ಶಬ್ದ ಉಂಟಾಗಿದ್ದರಿಂದ, ಗ್ರಾಮಸ್ಥರು ಮನೆಯಿಂದ ಹೊರಬಂದರು.

ತಾಲ್ಲೂಕಿನ ತೋಳ್ಳಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಗಟಮಡಕ ಗ್ರಾಮದಲ್ಲಿ ಕೆಲ ಸೆಕೆಂಡುಗಳ ಕಾಲ ಭೂಮಿ ಕಂಪನ ಉಂಟಾಗಿದೆ. ಭಾರಿ ಶಬ್ದ ಕೇಳಿಸಿದೆ. ಇದರಿಂದ ಮನೆಯಲ್ಲಿ ಜೋಡಿಸಿದ್ದ ಪಾತ್ರೆಗಳು, ವಸ್ತುಗಳು ಕೆಳಕ್ಕೆ ಉರುಳಿದೆ. ಜನರಿಗೆ ಭಯದ ವಾತಾವರಣ ಸೃಷ್ಟಿಯಾಗಿತ್ತು.

‘ಗ್ರಾಮದಲ್ಲಿ ಭಾನುವಾರ ಬೆಳಗ್ಗೆ 7.5ಕ್ಕೆ ಭೂಮಿ ಕಂಪನದ ಅನುಭವ ಆಗಿದೆ. ಮನೆಯಲ್ಲಿದ್ದ ಪಾತ್ರೆ, ವಸ್ತುಗಳು ಚೆಲ್ಲಾಪಿಲ್ಲೆಯಾಗಿ ಕೆಳಗೆ ಬಿದ್ದಿವೆ. ನಡುಕದ ಅನುಭವ ಆಗಿದೆ. ಭಾರಿ ಶಬ್ದ ಕೇಳಿಸಿತು. ಇದರಿಂದ ಮನೆಯಲ್ಲಿದ್ದ ಜನರು ಹೊರಗೆ ಬಂದಿದ್ದೇವೆ’ ಎಂದು ಆಗಟಮಡಕ ಗ್ರಾಮದ ಎ.ಎನ್.ಶ್ರೀರಾಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಭೂಮಿ ಕಂಪನ ಗ್ರಾಮದಲ್ಲಿ ಮಾತ್ರ ಆಗಿದೆ. ಜನರು ಭಯದ ವಾತಾವರಣದಲ್ಲಿ ಇದ್ದರೂ, ಸಂಬಂಧಪಟ್ಟ ತಾಲ್ಲೂಕು ಆಡಳಿತ, ಪಂಚಾಯಿತಿ, ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.