ADVERTISEMENT

ವೃದ್ಧನ ಬದುಕಿಗೆ ಆಸರೆಯಾದ ಮೀನು: ಇಳಿ ವಯಸಿನಲ್ಲಿ ಸ್ವಾವಲಂಬಿ ಜೀವನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 8:09 IST
Last Updated 19 ಅಕ್ಟೋಬರ್ 2024, 8:09 IST

ಜಿಲೇಬಿ ತಳಿಯ ಮೀನುಗಳು

ಜಿಲೇಬಿ ತಳಿಯ ಮೀನುಗಳು

ಬಾಗೇಪಲ್ಲಿ: ಪಟ್ಟಣದ 3ನೇ ವಾರ್ಡ್‌ ನಿವಾಸಿ 60 ವರ್ಷದ ಶಿವರಾಮು ಅವರು ಜೀವನ ನಡೆಸಲು ಮೀನುಗಳು ಆಸರೆಯಾಗಿದೆ. ಇಳಿ ವಯಸ್ಸಿನಲ್ಲೂ ಸ್ವಾಲಂಭಿ ಜೀವನ ನಡೆಸಲು ಮೀನು ಹಿಡಿದು ಮನೆ ಮನೆಗೆ ಮತ್ತು ಹೋಟೆಲ್‌ಗಳಿಗೆ ಮಾರಾಟ ಮಾಡುವ ಕಾಯಕ ನೆಚ್ಚಿಕೊಂಡಿದ್ದಾರೆ.

ADVERTISEMENT

ತೀಮಾಕಲಪಲ್ಲಿಯ ಬಳಿ ಇರುವ ಚಿತ್ರಾವತಿ ನದಿಯಲ್ಲಿ ಮೀನು ಹಿಡಿದು ಕಡಿಮೆ ಬೆಲೆ ಮಾರಾಟ ಮಾಡುತ್ತಾ, ಬದುಕಿನ ಬಂಡಿ ದೂಡುತ್ತಿದ್ದಾರೆ.

ಶಿವರಾಮು ಚೇಳೂರು ತಾಲ್ಲೂಕಿನ ಜಿಲಿಜಿಗಾರಿಪಲ್ಲಿ ಗ್ರಾಮದವರು. ಕೊರೊನಾ ಸಮಯದಲ್ಲಿ ಪಟ್ಟಣಕ್ಕೆ ವಲಸೆ ಬಂದು ನೆಲಸಿದ್ದಾರೆ.

ಕೃಷಿ ಮಾಡುತ್ತಿದ್ದ ಶಿವರಾಮು ಬೆಳೆ ನಷ್ಟದಿಂದ ಬೇಸಾಯದಿಂದ ವಿಮುಖರಾಗಿ ನೆರೆಹೊರೆಯ ಹೊಲ ಗದ್ದೆಗಳಲ್ಲಿ ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದರು. ಇದೀಗ ದುಡಿಯಲು ಆಸಕ್ತರಾಗಿರುವ ಸಣ್ಣಪುಟ್ಟ ವ್ಯಾಪಾರ ಮಾಡುತ್ತಾರೆ. ಈಗ ಮಳೆ ಕಾರಣದಿಂದ ಮೀನು ವ್ಯಾಪಾರಕ್ಕೆ ಇಳಿದಿದ್ದಾರೆ.

ಪ್ರತಿದಿನ ಗಾಳ ಹಾಕಿ 6 ರಿಂದ 8 ಕೆ.ಜಿ ಮೀನು ಹಿಡಿಯುವ ಶಿವರಾಮು ಚೀಲದಲ್ಲಿ ತುಂಬಿದ ಮೀನುಗಳನ್ನು ಅಂಗಡಿ ಹಾಗೂ ಮನೆಗಳ ಮುಂದೆ ಮಾರಾಟ ಮಾಡುತ್ತಾರೆ. ಇದರಿಂದ ನಿತ್ಯ ₹300–₹400 ಗಳಿಸುತ್ತಾರೆ. ಬಂದ ಹಣದಲ್ಲಿ ಕುಟುಂಬ ಪೋಷಣೆ ಮತ್ತು ತಮ್ಮ ಔಷಧಿ ಖರೀದಿಸಲು ಬಳಕೆಗೆ ಮಾಡಿಕೊಂಡಿದ್ದಾರೆ.

‘ಮಳೆ ಬಂತೆಂದರೆ ಶಿವರಾಮು ಒಳ್ಳೆಯ ಮೀನು ಹಿಡಿದು ಮಾರಾಟ ಮಾಡುತ್ತಾರೆ. ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಕೊಡುತ್ತಾರೆ. ಇಳಿ ವಯಸ್ಸಿನಲ್ಲಿ ಮೀನುಗಳು ಹಿಡಿದು ಮಾರಾಟ ಮಾಡಿ ಸ್ವಾವಲಂಬಿ ಜೀವನ ಮಾಡುತ್ತಿರುವ ಶಿವರಾಮು ಯುವ ಪೀಳಿಗೆಗೆ ಮಾದರಿ ಆಗಿದ್ದಾರೆ’ ಪಟ್ಟಣದ ಹಿರಿಯ ನಾಗರಿಕ ಅಬ್ದುಲ್ ಕರೀಂಸಾಬ್ ತಿಳಿಸಿದ್ದಾರೆ.

ಸುಮ್ಮನೆ ಕೂರಲು ಆಗಲ್ಲ

ದುಡಿಯಲು ನಿಶಕ್ತರಾಗಿದ್ದೇನೆ. ವೃಥಾ ಕೂರಲು ಆಗಲ್ಲ. ಮೀನುಗಳು ಹಿಡಿಯುವ ಕಾಯಕ ಮೊದಲಿನಿಂದಲೂ ಕಲಿತಿದ್ದೆ. ಮಳೆಯಿಂದ ಚಿತ್ರಾವತಿ ನದಿ ಉತ್ತಮವಾಗಿ ಹರಿಯುತ್ತದೆ. ಈಗ ಮೀನು ಹಿಡಿಯಲು ಸಕಾಲ. ಹೀಗಾಗಿ ಮೀನು ಹಿಡಿದು ಮಾರಾಟ ಮಾಡಿ, ಬಂದ ಹಣದಲ್ಲಿ ಕುಟುಂಬ ಪೋಷಣೆಗೆ ಬಳಸುತ್ತಿದ್ದೇನೆ - ಶಿವರಾಮು, ವೃದ್ಧ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.