ADVERTISEMENT

ಬಾರದ ಬೆಳೆನಷ್ಟ ಪರಿಹಾರ, ಪ್ರತಿಭಟನೆ

ಪಿಡಿಒಗಳಿಂದ ಅವೈಜ್ಞಾನಿಕ ಬೆಳೆ ಸಮೀಕ್ಷೆ ಆರೋಪ

​ಪ್ರಜಾವಾಣಿ ವಾರ್ತೆ
Published 3 ಮೇ 2024, 13:47 IST
Last Updated 3 ಮೇ 2024, 13:47 IST
ಪಿಡಿಒಗಳು ಬೆಳೆ ಸಮೀಕ್ಷೆಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಆರೋಪಿಸಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ರೈತರು ಪ್ರತಿಭಟನೆ ನಡೆಸಿದರು
ಪಿಡಿಒಗಳು ಬೆಳೆ ಸಮೀಕ್ಷೆಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಆರೋಪಿಸಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ರೈತರು ಪ್ರತಿಭಟನೆ ನಡೆಸಿದರು   

ಗೌರಿಬಿದನೂರು: ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ತಾಲ್ಲೂಕಿನಲ್ಲಿ ರೈತರಿಗೆ ಬೆಳೆ ವಿಮೆ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ರೈತರು ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಮುಂದೆ ಗುರುವಾರ ಧರಣಿ ನಡೆಸಿದರು.

ತಾಲ್ಲೂಕಿನ ಇಡಗೂರು, ಸೊನಗಾನಹಳ್ಳಿ, ಬೇವಿನಹಳ್ಳಿ, ಅಲೀಪುರ, ಜಿ.ಬೊಮ್ಮಸಂದ್ರ, ಗಂಗಸಂದ್ರ, ಕಲ್ಲಿನಾಯಕನಹಳ್ಳಿ, ಮಿಣಕನಗುರ್ಕಿ, ಅಲಕಾಪುರ ಗ್ರಾಮ ಪಂಚಾಯುತಿ ರೈತರು ತಾಲ್ಲೂಕು ರೈತಸಂಘ, ಹಸಿರುಸೇನೆ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒಗಳು ಸರಿಯಾಗಿ ಸಮೀಕ್ಷೆ ನಡೆಸದೆ, ಅವರ ಸಹಾಯಕರನ್ನು ಜಮೀನುಗಳಿಗೆ ಕಳಿಹಿಸಿ ಸಮೀಕ್ಷೆ ಮಾಡಿಸಿದ್ದಾರೆ. ಪಿಡಿಒಗಳು, ಕೃಷಿ ಅಧಿಕಾರಿಗಳು, ವಿಮೆ ಪ್ರತಿನಿಧಿಗಳು ಸ್ಥಳ ಪರಿಶೀಲನೆ ಮಾಡಿ ಸಮೀಕ್ಷೆ  ನಡೆಸದೆ, ಬೇಜವಾಬ್ದಾರಿಯಿಂದ ಸಮೀಕ್ಷೆ ವರದಿ ತಯಾರಿಸಿದ್ದಾರೆ. ಇದರಿಂದ ಬೆಳೆನಷ್ಟ ಪರಿಹಾರ ರೈತರ ಕೈ ಸೇರುತ್ತಿಲ್ಲ ಎಂದು ರೈತ ಸಂಘದ ಅಧ್ಯಕ್ಷ ಲೋಕೇಶ್ ಗೌಡ ದೂರಿದರು.

ADVERTISEMENT

ಬೆಳೆ ನಷ್ಟ ಸಮೀಕ್ಷೆಯಲ್ಲಿ ಲೋಪ ಎಸಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಿಡಿಒಗಳು ನಿಖರವಾದ ಮಾಹಿತಿ ನೀಡದ ಕಾರಣ ಕೆಲಕಾಲ ಪಿಡಿಒ ಮತ್ತು ರೈತರ ನಡುವೆ ವಾಗ್ವಾದ ನಡೆಯಿತು.

ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಯ್ಯ ಮಧ್ಯ ಪ್ರವೇಶಿಸಿ, ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸಿ ರೈತ ನ್ಯಾಯ ಕೊಡಿಸುವ ಭರವಸೆ ನೀಡಿದರು.

ತಾಲ್ಲೂಕು ರೈತ ಸಂಘದ, ಎಂ. ಆರ್.ಲಕ್ಷ್ಮಿ ನಾರಾಯಣ ನರಸಿಂಹ ಮೂರ್ತಿ ಸನತ್ ಕುಮಾರ್, ಶಶಿ ಬಾಬು, ತಿಮ್ಮೇಗೌಡ, ನರಸಿಂಹಮೂರ್ತಿ, ಗೋಪಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.