ADVERTISEMENT

ಗೌರಿಬಿದನೂರು: ಮನೆ ಮನೆಗೆ ತೆರಳಿ ಡೆಂಗಿ ಜಾಗೃತಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 13:19 IST
Last Updated 9 ಜುಲೈ 2024, 13:19 IST
ತಾಲ್ಲೂಕು ಪಂಚಾಯಿತಿಯಿಂದ ಸಾರ್ವಜನಿಕರಿಗೆ ಡೆಂಗಿ ಜಾಗೃತಿ ಮೂಡಿಸಲಾಯಿತು
ತಾಲ್ಲೂಕು ಪಂಚಾಯಿತಿಯಿಂದ ಸಾರ್ವಜನಿಕರಿಗೆ ಡೆಂಗಿ ಜಾಗೃತಿ ಮೂಡಿಸಲಾಯಿತು   

ಗೌರಿಬಿದನೂರು: ತಾಲ್ಲೂಕಿನ ಚಿಕ್ಕಕುರಗೋಡು, ದೊಡ್ಡಕುರುಗೋಡು ಮತ್ತು ಹುದುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡೆಂಗಿ ಹರಡದಂತೆ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಯಿತು.

ಇಒ ಜಿ.ಕೆ ಹೊನ್ನಯ್ಯ ಮಾತನಾಡಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಡೆಂಗಿ ಜ್ವರದ ಬಗ್ಗೆ ಅರಿವು ಮೂಡಿಸಲು ಸಭೆ ನಡೆಸಲಾಗಿದೆ. ಶಾಲಾ ಮಕ್ಕಳೊಂದಿಗೆ ಜಾಥಾ ನಡೆಸಿದರು. ರಾಜ್ಯದಾದ್ಯಂತ ವ್ಯಾಪಕವಾಗಿ ಜ್ವರ ಹರಡುತ್ತಿದ್ದು ಸಾರ್ವಜನಿಕರು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಪ್ರತಿ ಶುಕ್ರವಾರ ಒಣಗಲು ದಿನ ಕೈಗೊಳ್ಳಬೇಕು. ಇದರಿಂದ ಸೊಳ್ಳೆ ಲಾರ್ವ ಹಂತದಲ್ಲೇ ಸಾಯುತ್ತವೆ ಎಂದರು.

ಪ್ಲಾಸ್ಟಿಕ್ ನಿಷೇಧದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ADVERTISEMENT

ತಾಲ್ಲೂಕು ಪಂಚಾಯಿತಿ ಉಪ ನಿರ್ದೇಶಕ ಕರಿಯಪ್ಪ, ಆರೋಗ್ಯಾಧಿಕಾರಿ ಚಂದ್ರಮೋಹನ್, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.