ADVERTISEMENT

19 ರಿಂದ ಕೈವಾರದಲ್ಲಿ ಗುರುಪೂಜಾ ಸಂಗೀತೋತ್ಸವ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 15:26 IST
Last Updated 7 ಜುಲೈ 2024, 15:26 IST
ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ಮಾತನಾಡಿದರು
ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ಮಾತನಾಡಿದರು   

ಚಿಂತಾಮಣಿ: ಕೈವಾರದ ಯೋಗಿ ನಾರೇಯಣ ತಾತಯ್ಯರ ಮಠದಲ್ಲಿ ಗುರುಪೂರ್ಣಿಮಾ ಪ್ರಯುಕ್ತ ಗುರುಪೂಜಾ ಸಂಗೀತೋತ್ಸವವು ಜುಲೈ 19 ರಿಂದ 21 ರವರೆಗೆ ನಡೆಯಲಿದೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ತಿಳಿಸಿದರು.

ಬಾಲಕೃಷ್ಣ ಭಾಗವತರ್ ಮಾತನಾಡಿ, ಜುಲೈ 19ರ ಸಂಜೆ ಪಿ.ಜೆ.ಬ್ರಹ್ಮಾಚಾರಿ ತಂಡದವರಿಂದ ಪಿಟೀಲು ಸೋಲೋ, ಅಧಿತಿ ಪ್ರಹ್ಲಾದ್, ವಿನಯ್ ಶರ್ವ, ಲಕ್ಷ್ಮಿ ಹೊಸೂರು, ಡಿ.ಆರ್.ರಾಜಪ್ಪ ತಂಡದಿಂದ ಗಾಯನ ಹಾಗೂ ಭವ್ಯಮಂಜುನಾಥ್ ತಂಡದವರಿಂದ ಭರತನಾಟ್ಯ ಇರುತ್ತದೆ ಎಂದರು.

ಜುಲೈ 20ರಂದು ಚೆನ್ನೈನ ಪದ್ಮಶ್ರೀ ಎ.ಕನ್ಯಾಕುಮಾರಿ ಪಿಟೀಲು, ಸಿ.ಕೆ.ಪತಂಜಲಿ ತಂಡ ಕೊಳಲು, ಕೇರಳದ ಸೂರ್ಯಗಾಯತ್ರಿ ಗಾಯನ, ಸಿಕ್ಕಿಲ್ ಗುರುಚರಣ್ ತಂಡದವರಿಂದ ಗಾಯನ, ರುದ್ರಾಕ್ಷ ನಾಟ್ಯಾಲಯ ಬೆಂಗಳೂರು ಇವರಿಂದ ಭರತನಾಟ್ಯ, ಚೆನ್ನೈನ ಕೆ.ವಿ.ಪ್ರಸಾದ್, ಬಿ.ಹರಿಕುಮಾರ್, ಬೆಂಗಳೂರು ಪ್ರವೀಣ್ ಮೃದಂಗ ವಾದನವಿರುತ್ತದೆ.

ADVERTISEMENT

ಜುಲೈ 21 ಗುರುಪೂರ್ಣಿಮ ದಿನ ಬೆಳಗ್ಗೆ ಗುರುಪೂಜೆ ನಡೆಸಲಾಗುವುದು. ಮೃದಂಗ ವಿದ್ವಾಂಸ ವಿ.ಪ್ರವೀಣ್ ಹಾಗೂ ಕೆ.ರಾಜಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದರು.

ಆನೂರು ಅನಂತಕೃಷ್ಣಶರ್ಮ ತಂಡದವರಿಂದ ಲಯಲಹರಿ ತಾಳವಾದ್ಯ, ಸರಸ್ವತಿ ರಾಜಗೋಪಾಲನ್ ವೀಣಾವಾದನ, ಭೈರತಿ ಆಂಜಿನಪ್ಪ ತಂಡ ಗಾಯನ, ತೇಜಸ್ವಿನಿ ಮನೋಜ್ ಕುಮಾರ್ ಗಾಯನ, ಕೆ.ಸುಧಾಮಣಿ ವೆಂಕಟರಾಘವನ್ ಗಾಯನ, ಸುಬ್ಬಲಕ್ಷ್ಮಿ ಸ್ಯಾಕ್ಸೋಪೋನ್, ಮಹಾಲಿಂಗಯ್ಯ ಮಠದ ತಂಡ ಹಿಂದೂಸ್ಥಾನಿ ಗಾಯನ, ನೂಪುರ ಫೈನ್ ಆರ್ಟ್ಸ್‌ನ ರೂಪರಾಜೇಶ್ ತಂದದವರಿಂದ ಕೂಚುಪುಡಿ ನೃತ್ಯ ಇರುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.