ADVERTISEMENT

ಚಿಕ್ಕಬಳ್ಳಾಪುರ: ಸರ್ಕಾರಿ ಬಸ್‌ನಲ್ಲಿ ಕೋಳಿಗೂ ಅರ್ಧ ಟಿಕೆಟ್

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 19:30 IST
Last Updated 31 ಆಗಸ್ಟ್ 2021, 19:30 IST
ಕೋಳಿಯೊಂದಿಗೆ ಪ್ರಯಾಣಿಕ
ಕೋಳಿಯೊಂದಿಗೆ ಪ್ರಯಾಣಿಕ   

ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಪೆರೇಸಂದ್ರದಿಂದ ಸೋಮೇಶ್ವರಕ್ಕೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ವ್ಯಕ್ತಿಯೊಬ್ಬರು ತಮ್ಮ ಜತೆ ತಂದಿದ್ದ ಕೋಳಿಗೆ ಅರ್ಧ ಟಿಕೆಟ್ ಪಡೆದಿದ್ದಾರೆ.

ಹೀಗೆ ಕೋಳಿಯೊಂದಿಗೆ ಪ್ರಯಾಣಿಸುತ್ತಿರುವ ಪ್ರಯಾಣಿಕ, ಟಿಕೆಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪ್ರಸಂಗ ಒಂದೆಡೆ ಮನರಂಜನೆಗೆ ಮತ್ತೊಂದೆಡೆ ನಿರ್ವಾಹಕರ ಕರ್ತವ್ಯ ಪ್ರಜ್ಞೆಗೆ ಸಾಕ್ಷಿ ಎಂದು ಜಾಲತಾಣಗಳಲ್ಲಿ ಚರ್ಚೆಗಳು ನಡೆದಿವೆ.

ಆಗಿದ್ದೇನು?: ಚಿಕ್ಕಬಳ್ಳಾಪುರದಿಂದ ಸಾದಲಿಗೆ ಕೆಎಸ್‌ಆರ್‌ಟಿಸಿ ಬಸ್ ತೆರಳುತ್ತಿತ್ತು. ವೀರರಾವುತನಹಳ್ಳಿಯ ವ್ಯಕ್ತಿಯೊಬ್ಬರು ಕೋಳಿಯೊಂದಿಗೆ ಪೆರೇಸಂದ್ರದಲ್ಲಿ ಬಸ್ ಹತ್ತಿದರು. ಸೋಮೇಶ್ವರಕ್ಕೆ ಟಿಕೆಟ್ ಪಡೆದರು. ಜತೆಯಲ್ಲಿದ್ದ ಕೋಳಿಯನ್ನು ನೋಡಿದ ನಿರ್ವಾಹಕರು ಅದಕ್ಕೂ ಟಿಕೆಟ್ ಪಡೆಯಬೇಕು ಎಂದು ಕೇಳಿದರು. ಆಗ ಪ್ರಯಾಣಿಕ ಅರ್ಧ ಟಿಕೆಟ್ ಪಡೆದರು.

ADVERTISEMENT

ಕೆಎಸ್‌ಆರ್‌ಟಿಸಿ ನಿಯಮಗಳ ಪ್ರಕಾರ ಬಸ್‌ಗಳಲ್ಲಿ ಪ್ರಾಣಿ ಪಕ್ಷಿಗಳನ್ನು ಕೊಂಡೊಯ್ದರೆ ಅವುಗಳಿಗೆ ಟಿಕೆಟ್ ಪಡೆಯಬೇಕು. ದೊಡ್ಡ ನಾಯಿ ಇದ್ದರೆ ಪೂರ್ಣ ಟಿಕೆಟ್, ಮರಿ ಇದ್ದರೆ ಅರ್ಧ ಟಿಕೆಟ್ ಹಾಗೂ ಪಕ್ಷಿಗಳಾಗಿದ್ದರೆ ಅರ್ಧ ಟಿಕೆಟ್ ಪಡೆಯಬೇಕು ಎನ್ನುವ ನಿಯಮವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.