ಗೌರಿಬಿದನೂರು: ನಗರದ ತಾಲ್ಲೂಕಿನ ಡಿ.ಪಾಳ್ಯ ಗ್ರಾಮದ ಜೈ ಹನುಮಾನ್ ಆಟೊ ಚಾಲಕರ ಸಂಘದಿಂದ 24ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಭಾನುವಾರ ಆಚರಿಸಲಾಯಿತು.
ಖಾದರ್ಸುಭಾನ್ಖಾನ್ ಮಾತನಾಡಿ, ಗಡಿ ಭಾಗದಲ್ಲಿ ಬೇರೆ ಭಾಷೆಯ ಪ್ರಭಾವ ಹೆಚ್ಚಾಗಿದ್ದರು ಸಹ ಕನ್ನಡ ಭಾಷೆ, ನೆಲ, ಜಲದ ಮೇಲೆ ಈ ಭಾಗದ ಜನರಿಗೆ ವಿಶೇಷ ಅಭಿಮಾನವಿದೆ. ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ಕನ್ನಡ ನಿತ್ಯೋತ್ಸವವಾಗಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹ ಮೂರ್ತಿ ಮಾತನಾಡಿ, ಕಳೆದ 24 ವರ್ಷಗಳಿಂದ ಕನ್ನಡ ರಾಜ್ಯೋತ್ಸವದ ಮೂಲಕ ಕನ್ನಡವನ್ನು ಗಡಿ ಭಾಗದಲ್ಲಿ ಪಸರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಆಟೊ ಚಾಲಕ ಸಂಘದ ಅಧ್ಯಕ್ಷ ನರಸಿಂಹಪ್ಪ, ನರಸಿಂಹ ಮೂರ್ತಿ, ನೂರುಲ್ಲ, ಶರತ್, ಸೂರಿ, ಸುದರ್ಶನ್, ಮಂಜುನಾಥ್, ಪ್ರವೀಣ್, ಸನ್ನಿ, ಹರೀಶ್, ಬಾಲಕೃಷ್ಣ, ಚಂದ್ರ, ವೆಂಕಟೇಶ್, ಲಕ್ಷ್ಮಿನಾರಾಯಣ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.