ADVERTISEMENT

ಗುಡಿಬಂಡೆ ಕೋಟೆ ಮೇಲೆ ಕನ್ನಡ ರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 14:19 IST
Last Updated 24 ನವೆಂಬರ್ 2024, 14:19 IST
ಗುಡಿಬಂಡೆ ಕೋಟೆ ತುದಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು
ಗುಡಿಬಂಡೆ ಕೋಟೆ ತುದಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು   

ಗೌರಿಬಿದನೂರು: ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತು, ಗುಡಿಬಂಡೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಹೊಯ್ಸಳ ಚಾರಣಿಗರ ತಂಡದ ಸದಸ್ಯರು ಭಾನುವಾರ ಗುಡಿಬಂಡೆ ಕೋಟೆಯ ತುದಿಯಲ್ಲಿ ಕನ್ನಡ ಬಾವುಟ ಹಾರಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಿದರು.

ಧ್ವಜಾರೋಹಣವನ್ನು ಗುಡಿಬಂಡೆ ಕಸಾಪ ಅಧ್ಯಕ್ಷ ಬಿ.ಮಂಜುನಾಥ್ ನೆರವೇರಿಸಿದರು.

ಹೊಯ್ಸಳ ಚಾರಣಿಗರ ತಂಡದ ಅಧ್ಯಕ್ಷ ಅಶೋಕ್ ಮಾತನಾಡಿ, ‘ಇಂದಿನ ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಕನ್ನಡಿಗರಾದ ನಾವು ನುಡಿ ಕನ್ನಡ, ನಡೆ ಕನ್ನಡ, ಉಸಿರು ಕನ್ನಡ ಎಂದು ಜೀವಿಸುತ್ತಿದ್ದೇವೆ. ಜೊತೆಗೆ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಬೇಕು’ ಎಂದರು.

ADVERTISEMENT

ಪ್ರಾಧ್ಯಾಪಕ ನಂಜುಂಡಪ್ಪ ಮಾತನಾಡಿ, ‘ಕರ್ನಾಟಕಕ್ಕೆ ಆಗಮಿಸುವ ಅನ್ಯಭಾಷಿಗರಿಗೆ ಕನ್ನಡವನ್ನು ಕಲಿಸಿ, ನಾವು ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಎಲ್ಲೆಡೆ ವಿಸ್ತರಿಸಬೇಕು’ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀನಿವಾಸ್ ಯಾದವ್ ಕನ್ನಡ ಹೋರಾಟದ ಬಗ್ಗೆ ವಿವರವಾಗಿ ತಿಳಿಸಿದರು. ಕಸಾಪ ಸಂಚಾಲಕ ಶ್ರಿನಿವಾಸ್ ಗಾಂಧಿ, ನರಸಿಂಹ ಮೂರ್ತಿ, ನರಸಿಂಹ ಗೌಡ, ಈರೇಗೌಡ, ಜಯಣ್ಣ, ಶ್ರೀನಿವಾಸ್, ರಾಜೇಶ್ ಪ್ರವೀಣ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.