ಬಾಗೇಪಲ್ಲಿ: ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಗೆ ಸಿಪಿಎಂ ಅಭ್ಯರ್ಥಿ ಎಂ.ಪಿ.ಮುನಿವೆಂಕಟಪ್ಪ ‘ಓಟು ಕೊಡಿ, ನೋಟು ಕೊಡಿ’ ಎಂದು ಮತಯಾಚನೆಗೆ ಮುಂದಾಗಿದ್ದಾರೆ.
ವಿದ್ಯಾರ್ಥಿಯ ದೆಸೆಯಿಂದಲೇ ವಿದ್ಯಾರ್ಥಿ ಸಂಘಟನೆ ಮೂಲಕ ವಿದ್ಯಾರ್ಥಿಗಳ, ಜನಸಾಮಾನ್ಯರ, ಕೃಷಿ ಕೂಲಿಕಾರ್ಮಿಕರ, ಕೋಮುವಾದದ ವಿರುದ್ಧ ಬೀದಿಗಿಳಿದು ಮುನಿವೆಂಕಟಪ್ಪ ಹೋರಾಟ ನಡೆಸಿದ್ದಾರೆ. ಮಾಜಿ ಶಾಸಕ ದಿ.ಜಿ.ವಿ.ಶ್ರೀರಾಮರೆಡ್ಡಿ ಗರಡಿಯಲ್ಲಿ ಉಳುವವನಿಗೆ ಭೂಮಿ, ಶಾಶ್ವತ ನೀರಾವರಿ, ಭೂ ಮಾಲೀಕರಿಂದ ಬಡವರಿಗೆ ಭೂಮಿ ಕೊಡಿಸಲು ಹೋರಾಟ ಮಾಡಿದ್ದಾರೆ.
ಎಂ.ಪಿ.ಮುನಿವೆಂಕಟಪ್ಪ ಸಿಪಿಎಂ ಕೇಂದ್ರ ಸಮಿತಿ ತೀರ್ಮಾನದ ಮೇರೆಗೆ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ.
ಮುನಿವೆಂಕಟಪ್ಪ ಚುನಾವಣಾ ನಾಮಪತ್ರದಲ್ಲಿ ಬ್ಯಾಂಕ್ ಖಾತೆ, ಪಾನ್‌ಕಾರ್ಡ್ ಇಲ್ಲ, ಕೇವಲ ಒಂದು ಸಾವಿರ ರೂಪಾಯಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಇದರಿಂದ ಮತ ನೀಡುವ ಜತೆಗೆ ಕಾಣಿಕೆ ನೀಡಿ ಎಂದು ಮನವಿ ಮಾಡಿ, ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.