ADVERTISEMENT

ಕನಂಪಲ್ಲಿ ಓಟಿಕೆರೆ ಅಭಿವೃದ್ಧಿಗೆ ಅನುದಾನ: ಸಚಿವ ಸುಧಾಕರ್

​ಪ್ರಜಾವಾಣಿ ವಾರ್ತೆ
Published 28 ಜನವರಿ 2024, 14:18 IST
Last Updated 28 ಜನವರಿ 2024, 14:18 IST
<div class="paragraphs"><p>ಚಿಂತಾಮಣಿಯ ಕನಂಪಲ್ಲಿಯ ಓಟಿಕೆರೆ ಅಭಿವೃದ್ಧಿ ಯೋಜನೆಯ ಕಾಮಗಾರಿಗೆ ಸಚಿವ ಡಾ.ಎಂ.ಸಿ.ಸುಧಾಕರ್ ಚಾಲನೆ ನೀಡಿದರು</p></div>

ಚಿಂತಾಮಣಿಯ ಕನಂಪಲ್ಲಿಯ ಓಟಿಕೆರೆ ಅಭಿವೃದ್ಧಿ ಯೋಜನೆಯ ಕಾಮಗಾರಿಗೆ ಸಚಿವ ಡಾ.ಎಂ.ಸಿ.ಸುಧಾಕರ್ ಚಾಲನೆ ನೀಡಿದರು

   

ಚಿಂತಾಮಣಿ: ಕನಂಪಲ್ಲಿ ಓಟಿಕೆರೆಯನ್ನು ₹46 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಉನ್ನತ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಶನಿವಾರ ಆಯೋಜಿಸಿದ್ದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಚಿಂತಾಮಣಿ-ಹೊಸಕೋಟೆಯ ಕೆ.ಶಿಪ್ ರಸ್ತೆಯ ನಿರ್ಮಾಣ ಸಮಯದಲ್ಲೇ ಕೆರೆಯ ಅಭಿವೃದ್ಧಿ ಯೋಜನೆ ರೂಪಿಸಲಾಗಿತ್ತು. ₹50 ಲಕ್ಷ ವೆಚ್ಚದಲ್ಲಿ ಹೂಳು ತೆಗೆಸಲಾಗಿತ್ತು. ಪಕ್ಕದಲ್ಲಿರುವ ಯಾದವ ವಿದ್ಯಾರ್ಥಿನಿಲಯವಿರುವ ಸ್ಥಳವೂ ಕೋಡಿಯ ಭಾಗವಾಗಿತ್ತು. ಯಾದವ ವಿದ್ಯಾರ್ಥಿನಿಲಯಕ್ಕೆ ಯಾವುದೇ ತೊಂದರೆ ಆಗಬಾರದು ಎಂದು ಕೆರೆಯ ಕೋಡಿಯನ್ನು ಹೊಸದಾಗಿ ರೂಪಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ADVERTISEMENT

ಕೆರೆಯ ಸುತ್ತ ತಂತಿ ಬೇಲಿ ಅಳವಡಿಕೆ, ಗ್ರಿಲ್ ಅಳವಡಿಕೆ, ವಾಕಿಂಗ್ ಪಾತ್ ಅಭಿವೃದ್ಧಿಪಡಿಸಲಾಗುವುದು. ಗಣೇಶ ಹಬ್ಬದ ಸಂದರ್ಭದಲ್ಲಿ ಗಣಪತಿಯನ್ನು ಈ ಕೆರೆಯಲ್ಲೇ ವಿಸರ್ಜಿಸುವುದರಿಂದ ಅದಕ್ಕೂ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.

ನೀರಾವರಿ ಇಲಾಖೆ ಅಧಿಕಾರಿಗಳು, ಮುಖಂಡ ಮೀಸೆವೆಂಕಟರೆಡ್ಡಿ, ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.