ಗೌರಿಬಿದನೂರು: ತಾಲ್ಲೂಕಿನ ನಾಮಗೊಂಡ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಹಳೆಯ ವಿದ್ಯಾರ್ಥಿಗಳು ಹಾಗೂ ಜಿಎನ್ಆರ್ ಟ್ರಸ್ಟ್ ಮುಖ್ಯಸ್ಥ ಸ್ವರೂಪ್ ಸ್ಮಾರ್ಟ್ ಕ್ಲಾಸ್ (ವಿಸ್ತಾಸ್ ಕಲಿಕೆ ಆಧಾರಿತ) ಅನ್ನು ಉದ್ಘಾಟಿಸಿದರು.
ಬಿಇಒ ಕೆ.ವಿ.ಶ್ರೀನಿವಾಸಮೂರ್ತಿ ಮಾತನಾಡಿ, ಶಾಲೆಯಲ್ಲಿ ಹೊಸದಾಗಿ ಅಳವಡಿಸಿದ ಸ್ಮಾರ್ಟ್ ಕ್ಲಾಸ್‌ಗಳಿಂದ ವಿದ್ಯಾರ್ಥಿಗಳಲ್ಲಿ ಕಲಿಕೆ ಆಸಕ್ತಿ ಹೆಚ್ಚುತ್ತದೆ. ಈ ರೀತಿಯ ಸೌಲಭ್ಯಗಳು ಎಲ್ಲ ಸರ್ಕಾರಿ ಶಾಲೆಗಳಿಗೂ ದೊರೆಯುವಂತಾಗಬೇಕು. ದಶಕಗಳ ಹಿಂದೆ ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಓದಿದ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಶಾಲೆಯಲ್ಲಿನ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಲು ಮೂರು ತರಗತಿ ಕೊಠಡಿಗಳಲ್ಲಿ ಸ್ಮಾರ್ಟ್ ಕ್ಲಾಸ್ ಕಲಿಕೆಗೆ ನೆರವಾಗಿದ್ದಾರೆ ಎಂದರು.
ಈ ವ್ಯವಸ್ಥೆ ಹೊಂದಿದ ತಾಲ್ಲೂಕಿನ ಗ್ರಾಮೀಣ ಭಾಗದ ಮೊದಲ ಸರ್ಕಾರ ಶಾಲೆ ಇದಾಗಿದೆ ಎಂದರು.
ಜಿಎನ್ಆರ್ ಟ್ರಸ್ಟ್ ಮುಖ್ಯಸ್ಥ ಸ್ವರೂಪ್ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲು ಸಾಕಷ್ಟು ಮಂದಿ ದಾನಿಗಳಿರುತ್ತಾರೆ. ಶಿಕ್ಷಕರು ಮತ್ತು ಪೋಷಕರು ಅವರನ್ನು ಸಂಪರ್ಕಿಸಿ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಿರುವ ಸೌಲಭ್ಯಗಳನ್ನು ಪಡೆಯಬೇಕು ಎಂದರು.
ಶಾಲೆಯ ಮುಖ್ಯ ಶಿಕ್ಷಕ ಎಚ್.ಜಗದೀಶ್ ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಸುಬ್ರಹ್ಮಣ್ಯ, ಜಿಎನ್ಆರ್ ಟ್ರಸ್ಟ್ ಮುಖ್ಯಸ್ಥ ಸ್ವರೂಪ್ ಮತ್ತು ನರೇಂದ್ರಬಾಬು, ಎಸ್‌ಡಿಎಂಸಿ ಸದಸ್ಯರಾದ ಪ್ರಭಾಕರರೆಡ್ಡಿ, ಭಾರತಿ, ವೀಣಾ, ಮುಖ್ಯ ಶಿಕ್ಷಕ ಎಚ್.ಜಗದೀಶ್, ಸಹಶಿಕ್ಷಕ ಚಂದ್ರಶೇಖರರೆಡ್ಡಿ, ಅಶ್ವತಪ್ಪ, ನಜುಮುನ್ನಿಸಾ, ರವೀಂದ್ರನಾಥ್, ವೆಂಕಟೇಶ್, ವಿಜಯಕುಮಾರ್, ಮಂಜುಳ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.