ADVERTISEMENT

ಪಹಣಿಗಳಲ್ಲಿ ವಕ್ಫ್ ಬೋರ್ಡ್ ಹೆಸರು ತೆಗೆಯಲು ಮನವಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 14:25 IST
Last Updated 7 ನವೆಂಬರ್ 2024, 14:25 IST
ಶಿಡ್ಲಘಟ್ಟದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸಾಮೂಹಿಕ ಬಣದ ಸದಸ್ಯರು ಗ್ರೇಡ್ 2 ತಹಶೀಲ್ದಾರ್ ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಿದರು
ಶಿಡ್ಲಘಟ್ಟದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸಾಮೂಹಿಕ ಬಣದ ಸದಸ್ಯರು ಗ್ರೇಡ್ 2 ತಹಶೀಲ್ದಾರ್ ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಿದರು   

ಶಿಡ್ಲಘಟ್ಟ: ರಾಜ್ಯದ ಕೆಲ ಜಿಲ್ಲೆಗಳ ರೈತರ ಫಹಣಿಗಳಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಾಗಿರುವುದನ್ನು ತಕ್ಷಣ ತೆಗೆದುಹಾಕಲು ಕ್ರಮವಹಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸಾಮೂಹಿಕ ಬಣದ ಸದಸ್ಯರು ಗ್ರೇಡ್ 2 ತಹಶೀಲ್ದಾರ್ ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಿದರು.

ರೈತರು ತಮ್ಮ ತಾತ ಮುತ್ತಾತರ ಕಾಲದಿಂದ ಉಳುಮೆ ಮಾಡಿಕೊಂಡು ಸ್ವಾಧೀನ ಹಾಗೂ ಅನುಭವದಲ್ಲಿದ್ದು, ಖಾತೆ, ಫಹಣಿಗಳು, ಮ್ಯುಟೇಶನ್ ಗಳು ಚಾಲ್ತಿಯಲ್ಲಿರುವಾಗ ಏಕಾಏಕಿ ಫಹಣಿಗಳ ಕಾಲಂ 9ರಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದು ಮಾಡಲಾಗಿದೆ. ವಕ್ಫ್ ಬೋರ್ಡ್ ಹೆಸರನ್ನು ತೆಗೆಯಲು ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ರೈತರ ಅನುಪಸ್ಥಿತಿಯಲ್ಲಿ, ರೈತರ ಅನುಮತಿ ಇಲ್ಲದೇ ಕಾಲಂ 9ರಲ್ಲಿ ವಕ್ಫ್ ಬೋರ್ಡ್ ಅಥವಾ ಇನ್ನಾವುದೇ ಬದಲಾವಣೆ ಮಾಡಬಾರದು ಎಂದು ಒತ್ತಾಯಿಸಿದರು.

ರೈತ ಸಂಘದ ರಾಜ್ಯ ಉಪಾದ್ಯಕ್ಷ ಬಿ.ಕೆ.ಮುನಿಕೆಂಪಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ತಾಲ್ಲೂಕು ಅಧ್ಯಕ್ಷ ಮುನೇಗೌಡ, ಕಾರ್ಯದರ್ಶಿ ನವೀನಾಚಾರ್ಯ, ಪದಾಧಿಕಾರಿಗಳಾದ ಸಂತೇ ಆಂಜಿನಪ್ಪ, ಎಚ್.ಎನ್.ಕದೀರೇಗೌಡ, ಸುಂಡ್ರಹಳ್ಳಿ ಕೆಂಪಣ್ಣ, ಬಳುವನಹಳ್ಳಿ ಪ್ರಕಾಶ್, ರವಿ, ಅರಿಕರೆ ಸಂತೋಷ್, ಸತೀಶ್ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.