ADVERTISEMENT

ಚೇಳೂರು: ಕೆಸರು ಗದ್ದೆಯಾದ ರಸ್ತೆ; ಜನರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 16:08 IST
Last Updated 22 ಅಕ್ಟೋಬರ್ 2024, 16:08 IST
ಚೇಳೂರು ಪಟ್ಟಣದ ತಾಲ್ಲೂಕು ಕಾರ್ಯಾಲಯದ ರಸ್ತೆ ಕೆಸರು ಗದ್ದೆಯಂತಾಗಿರುವುದು
ಚೇಳೂರು ಪಟ್ಟಣದ ತಾಲ್ಲೂಕು ಕಾರ್ಯಾಲಯದ ರಸ್ತೆ ಕೆಸರು ಗದ್ದೆಯಂತಾಗಿರುವುದು   

ಚೇಳೂರು: ಪಟ್ಟಣದ ಹೊರವಲಯದಿಂದ ಷೇರ್‌ಖಾನ್ ಕೋಟೆವರೆಗೂ ಬಾಗೇಪಲ್ಲಿ ಮುಖ್ಯ ರಸ್ತೆಯ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಮಳೆಗಾಲದಲ್ಲಿ ಸಂಕಷ್ಟ ಎದುರಿಸುವಂತಾಗಿದೆ ಎಂದು ನಾಗರಿಕರು ಮತ್ತು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯಲ್ಲಿ ಎರಡು ಮೂರು ಕಡೆ ಹಳೆ ಮೋರಿಗಳಿವೆ. ಅವುಗಳನ್ನು ಕಿತ್ತು ಹಾಕಿದ್ದು, ಡೀವೇಷನ್ ರೋಡ್ ಸರಿಯಾಗಿ ಮಾಡದೇ ಮೋರಿಗಳನ್ನು, ಟಾರ್ ರಸ್ತೆಯನ್ನು ಕಿತ್ತು ಹಾಕಿರುವ ಕಾರಣ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ. ಮೋರಿ ಪಕ್ಕದ ರಸ್ತೆಗೆ ಮಣ್ಣು ಹಾಕಿಸಿದ್ದು, ಮಳೆಯ ಕಾರಣ ಈ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ.

ನೂತನ ತಾಲ್ಲೂಕು ಕಾರ್ಯಾಲಯ ಮತ್ತು ಸರ್ಕಾರಿ ವಿದ್ಯಾರ್ಥಿನಿಲಯದ ಮುಂದೆಯೇ ಈ ರಸ್ತೆ ಇರುವುದರಿಂದ ದಿನತ್ಯದ ಓಡಾಟಕ್ಕೆ ತೊಂದರೆಯಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.