ADVERTISEMENT

ಶಿವರಾತ್ರಿ; ಆವಲಗುರ್ಕಿ ಈಶಾ ಯೋಗ ಕೇಂದ್ರದಲ್ಲಿ ನೇರ ಪ್ರಸಾರ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 20:03 IST
Last Updated 6 ಮಾರ್ಚ್ 2024, 20:03 IST
<div class="paragraphs"><p>ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿಯ ಈಶಾ ಯೋಗ ಕೇಂದ್ರ</p></div>

ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿಯ ಈಶಾ ಯೋಗ ಕೇಂದ್ರ

   

ಚಿಕ್ಕಬಳ್ಳಾಪುರ: ತಮಿಳುನಾಡಿನ ಕೋಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ ಮಾ.8ರ ಸಂಜೆ 6ರಿಂದ 9ರ ಬೆಳಗಿನ ಜಾವದವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಅಲ್ಲಿ ನಡೆಯುವ ಕಾರ್ಯಕ್ರಮಗಳನ್ನು ತಾಲ್ಲೂಕಿನ ಆಗವಲಗುರ್ಕಿಯ ಈಶಾ ಯೋಗ ಕೇಂದ್ರದಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.  

ಈಶಾ ಯೋಗ ಕೇಂದ್ರದಲ್ಲಿರುವ ಗೋಶಾಲೆಯಲ್ಲಿ ಅಲಂಕೃತ ಎತ್ತುಗಳನ್ನೂ ನೋಡಬಹುದು. 

ADVERTISEMENT

ಕೋಯಮತ್ತೂರಿನ ಈಶಾ ಕೇಂದ್ರದಲ್ಲಿ ನಡೆಯುವ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಭಾಗವಹಿಸುವರು. ಕಲಾವಿದರಾದ ಶಂಕರ್ ಮಹದೇವನ್, ಗುರುದಾಸ್ ಮಾನ್, ಪವನ್‌ದೀಪ್ ರಾಜನ್, ರತಿಜಿತ್ ಭಟ್ಟಾಚಾರ್ಯ, ಮಹಾಲಿಂಗಂ ಮತ್ತಿತರ ಗಾಯಕರು ಹಾಗೂ ಸೌಂಡ್ಸ್ ಆಫ್ ಈಶಾ ಮತ್ತು ಈಶಾ ಸಂಸ್ಕೃತಿಯಿಂದ ಆಕರ್ಷಕ ಪ್ರದರ್ಶನಗಳು ನಡೆಯಲಿವೆ ಎಂದು ಈಶಾ ಯೋಗ ಕೇಂದ್ರವು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.