ADVERTISEMENT

ಚಿಕ್ಕಬಳ್ಳಾಪುರ: ಮೈದುಂಬಿದೆ ಶ್ರೀನಿವಾಸ ಸಾಗರ ಜಲಾಶಯ

ನಿಲ್ಲದ ಪ್ರವಾಸಿಗರ ಹುಚ್ಚಾಟಗಳು; ಯಾವುದೇ ಸುರಕ್ಷತಾ ಕ್ರಮಗಳಿಲ್ಲ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 8:04 IST
Last Updated 19 ಅಕ್ಟೋಬರ್ 2024, 8:04 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ಶ್ರೀನಿವಾಸ ಸಾಗರ ಜಲಾಶಯ ಕೋಡಿ ಹರಿಯುತ್ತಿರುವುದು
ಚಿಕ್ಕಬಳ್ಳಾಪುರ ತಾಲ್ಲೂಕಿನ ಶ್ರೀನಿವಾಸ ಸಾಗರ ಜಲಾಶಯ ಕೋಡಿ ಹರಿಯುತ್ತಿರುವುದು   

ಪ್ರಜಾವಾಣಿ ಚಿತ್ರ; ಬಿ.ಆರ್.ಮಂಜುನಾಥ್

ಚಿಕ್ಕಬಳ್ಳಾಪುರ: ಇತ್ತೀಚೆಗೆ ಸುರಿದ ಮಳೆ ಕಾರಣದಿಂದ ತಾಲ್ಲೂಕಿನ ಶ್ರೀನಿವಾಸ ಸಾಗರ ಜಲಾಶಯ ಕೋಡಿ ಹರಿಯುತ್ತಿದೆ. ಮಳೆಗಾಲದಲ್ಲಿ ಮೈದುಂಬಿ ಹರಿಯುವ ಜಲಾಶಯವನ್ನು ಕಣ್ತುಂಬಿಕೊಳ್ಳಲು ಚಿಕ್ಕಬಳ್ಳಾಪುರವಷ್ಟೇ ಅಲ್ಲ ಹೊರ ಜಿಲ್ಲೆಗಳ ಪ್ರವಾಸಿಗರು ಸಹ ದೊಡ್ಡ ಸಂಖ್ಯೆಯಲ್ಲಿ ಜಲಾಶಯಕ್ಕೆ ಭೇಟಿ ನೀಡುತ್ತಾರೆ.

ಸಾಗರವು ಪ್ರವಾಸಿಗರು ಹಾಗೂ ಯುವ ಸಮುದಾಯಕ್ಕೆ ಆಕರ್ಷಣೆಯ ಕೇಂದ್ರ. ಈಗ ಕೋಡಿ ಬಿದ್ದಿರುವ ಕಾರಣ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ನಿತ್ಯ ಅಪಾರ ಸಂಖ್ಯೆಯಲ್ಲಿ ಇಲ್ಲಿಗೆ ಜನರು ಭೇಟಿ ನೀಡುತ್ತಾರೆ.

ADVERTISEMENT

ಆದರೆ ನೀರಿನಲ್ಲಿ ಆಟಕ್ಕೆ ಬರುವವರ ಹುಚ್ಚಾಟಗಳು ಸಹ ಹೆಚ್ಚಿವೆ. ಶ್ರೀನಿವಾಸ ಸಾಗರದ ಕೋಡಿಯ ತಡೆಗೋಡೆಯ ಮೇಲೆ ಏರಲು ಯುವಕರು ತಾ ಮುಂದು ನಾ ಮುಂದು ಎಂದು ಮುಗಿ ಬೀಳುತ್ತಿದ್ದಾರೆ. ಶುಕ್ರವಾರ ‘ಪ್ರಜಾವಾಣಿ’ ಛಾಯಾಗ್ರಹಕ ಜಲಾಶಯಕ್ಕೆ ಭೇಟಿ ನೀಡಿದಾಗಲೂ ಇಂತಹದ್ದೇ ಹುಚ್ಚಾಟಗಳು ಕಂಡು ಬಂದವು.

ಶ್ರೀನಿವಾಸ ಸಾಗರವು ಮೃತ್ಯುಕೂಪ ಎನ್ನುವ ಕುಖ್ಯಾತಿ ಸಹ ಪಡೆದಿದೆ. ಹಲವು ಮಂದಿ ಇಲ್ಲಿ ಈಜಲು ಮುಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಮಳೆಗಾಲದಲ್ಲಿ ಇಲ್ಲಿ ಪೊಲೀಸ್ ಭದ್ರತೆ ಅಗತ್ಯ ಎನ್ನುತ್ತಾರೆ ಪ್ರಜ್ಞಾವಂತರು.

ಶ್ರೀನಿವಾಸ ಸಾಗರದ ಕೋಡಿಯ ತಡೆಗೋಡೆಯಲ್ಲಿ ವಾನರನ ನಡಿಗೆ 
ಪ್ರವಾಸಿಗರ ನೀರಾಟ
ಜಲಾಶಯದ ತಡೆಗೋಡೆ ದಾಟಿರುವ ಯುವಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.