ಗೌರಿಬಿದನೂರು: ನಗರದ ಉತ್ತರ ಪಿನಾಕಿನಿ ನದಿ ಪಾತ್ರದಲ್ಲಿ ಅಕ್ರಮವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವ ಕುಟುಂಬಗಳನ್ನು ತೆರವುಗೊಳಿಸಲು ತಹಶೀಲ್ದಾರ್ ಮಹೇಶ್ ಪತ್ರಿ ಸಮೀಕ್ಷೆ ಕಾರ್ಯ ಕೈಗೊಂಡಿದ್ದಾರೆ.
ಮಂಗಳವಾರ, ಕಂದಾಯ ಇಲಾಖೆ ಮತ್ತು ನಗರ ಸಭೆ ಸಿಬ್ಬಂದಿ ಸುಮಂಗಲಿ ಬಡಾವಣೆ ಮತ್ತು ಟಿಪ್ಪು ನಗರದ ಉತ್ತರ ಪಿನಾಕಿನಿ ನದಿ ಪಾತ್ರದಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿರುವ ಕುಟುಂಬಗಳ ಮಾಹಿತಿ ಕಲೆಹಾಕಲಾಯಿತು.
ಇಲ್ಲಿರುವ ಬಹುತೇಕರು ಇಡಗೂರು ಗ್ರಾಮದವರು. ಬೇರೆ ಕಡೆ ಎರಡೆರಡು ಆರ್‌ಸಿಸಿ ಮನೆಗಳಿದ್ದು, ಕೇವಲ ವ್ಯಾಪಾರಕ್ಕೋಸ್ಕರ ಇಲ್ಲಿ ಗುಡಿಸಲು ನಿರ್ಮಿಸಿಕೊಂಡವರೂ ಇದ್ದಾರೆ. ಇಂತಹ ಅನರ್ಹ ಮತ್ತು ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಲಾಗುತ್ತಿದೆ.
ಈಗಾಗಲೇ, ಬುರ್ಜಾನುಕುಂಟೆ, ಕಾದಲವೇಣಿ, ಮತ್ತು ಸಾಗಾನಹಳ್ಳಿ ಗ್ರಾಮಗಳಲ್ಲಿ ಜಾಗವನ್ನು ಗುರುತಿಸಲಾಗಿದೆ. ಆಶ್ರಯ ಯೋಜನೆಯಡಿಯಲ್ಲಿ ಮನೆಗಳನ್ನು ನೀಡಲು, ಸರ್ವೇ ಕಾರ್ಯ ನಡೆಯುತ್ತಿದೆ. ಆಶ್ರಯ ಸಮಿತಿ ರಚನೆಯಾದ ಬಳಿಕ ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ತಹಶೀಲ್ದಾರ್ ಮಹೇಶ್ ಪತ್ರಿ ತಿಳಿಸಿದರು. ಕಂದಾಯ ಇಲಾಖೆಯ ಮತ್ತು ನಗರಸಭೆ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.