ADVERTISEMENT

ಶಿಡ್ಲಘಟ್ಟ: ಸೋಮೇಶ್ವರ ದೇಗುಲ ಧ್ವಜಸ್ತಂಭ ಪ್ರತಿಷ್ಟಾಪನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 14:30 IST
Last Updated 20 ಅಕ್ಟೋಬರ್ 2024, 14:30 IST
ಶಿಡ್ಲಘಟ್ಟದ ಪುರಾತನ ಸೋಮೇಶ್ವರ ದೇವಾಲಯದ ಧ್ವಜಸ್ತಂಭ ಪ್ರತಿಷ್ಟಾಪನೆ ಮಾಡಲಾಯಿತು
ಶಿಡ್ಲಘಟ್ಟದ ಪುರಾತನ ಸೋಮೇಶ್ವರ ದೇವಾಲಯದ ಧ್ವಜಸ್ತಂಭ ಪ್ರತಿಷ್ಟಾಪನೆ ಮಾಡಲಾಯಿತು   

ಶಿಡ್ಲಘಟ್ಟ: ನಗರದ ಪುರಾತನ ಕೋಟೆ ಸೋಮೇಶ್ವರ ದೇವಾಲಯದ ನವೀಕರಣ ಕಾರ್ಯ ನಡೆಯುತ್ತಿದ್ದು, ಭಾನುವಾರ ದೇವಾಲಯದ ಧ್ವಜಸ್ತಂಭ ಪ್ರತಿಷ್ಟಾಪನೆ ಕಾರ್ಯ ನಡೆಯಿತು.

‘ಈ ಸೋಮೇಶ್ವರ ದೇವಾಲಯವು ಕಾಲಕ್ರಮೇಣ ಶಿಥಿಲವಾಗಿತ್ತು. ಮುಜರಾಯಿಗೆ ಸೇರಿದ್ದರೂ ಅಭಿವೃದ್ಧಿಯಾಗಲಿಲ್ಲ. ಇದನ್ನು ಕಂಡ ಭಕ್ತರು ಡಾಲ್ಫಿನ್ ನಾಗರಾಜ್ ಅವರ ನೇತೃತ್ವದಲ್ಲಿ ಹಣ ಸಂಗ್ರಹಿಸಿ ದೇವಾಲಯ ದುರಸ್ತಿಗೆ ಮುಂದಾಗಿರುವರು. ಹಿಂದೆ ಚನ್ನಕೇಶ್ವರ ದೇವಾಲಯವೊಂದಿತ್ತು. ಅದು ಕಾಲಾನುಕ್ರಮದಲ್ಲಿ ನಾಶಗೊಂಡಿತು. ಅಲ್ಲಿನ ಕೆಲ ಶಿಲ್ಪಗಳು, ಕೆತ್ತನೆಗಳುಳ್ಳ ಕಂಬಗಳು ಸೋಮೇಶ್ವರ ದೇವಾಲಯದಲ್ಲಿ ಸೇರಿದವು ಎಂದು ಕೆಲ ಹಿರಿಯರು ಹೇಳುತ್ತಾರೆ.

‘ಕೋಟೆ ಸೋಮೇಶ್ವರ ದೇವಾಲಯ ಶಿಥಿಲವಾಗಿದ್ದನ್ನು ಕಂಡು ಸಮಾನಮನಸ್ಕರು ದೇವಾಲಯ ಜೀರ್ಣೋದ್ಧಾರ ಮಾಡಬೇಕೆಂದು ಹೊರಟೆವು. ಸಂಪೂರ್ಣವಾಗಿ ಪುನರುಜ್ಜೀವಗೊಳಿಸುವ ಮೂಲಕ ದೇವಾಲಯ ಉಳಿಸುತ್ತೇವೆ’ ಎಂದು ನಾಗರಾಜ್ ಹೇಳಿದರು.

ADVERTISEMENT

ಸತ್ಯನಾರಾಯಣ ಶಾಸ್ತ್ರೀ ಮತ್ತು ಬಶೆಟ್ಟಹಳ್ಳಿ ಕೃಷ್ಣಮೂರ್ತಿ ಶರ್ಮಾ ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.