ADVERTISEMENT

ಚಿಕ್ಕಬಳ್ಳಾಪುರ: ಜಿಲ್ಲೆಯ ನೀರಿನಲ್ಲಿ ಯುರೇನಿಯಂ ವಿಷ!

ಜಿಲ್ಲೆಯ 27 ಹಳ್ಳಿಗಳ ಅಧ್ಯಯನ: ನೀರು ಕುಡಿದರೆ ಮೂತ್ರಪಿಂಡ ವೈಫಲ್ಯ ಅಪಾಯ

ಡಿ.ಎಂ.ಕುರ್ಕೆ ಪ್ರಶಾಂತ
Published 14 ಡಿಸೆಂಬರ್ 2021, 4:33 IST
Last Updated 14 ಡಿಸೆಂಬರ್ 2021, 4:33 IST
..
..   

ಚಿಕ್ಕಬಳ್ಳಾಪುರ: ಕುಡಿಯುವ ನೀರಿನ ವಿಚಾರದಲ್ಲಿಜಿಲ್ಲೆಯ ಜನರಿಗೆ ಮತ್ತೊಂದು ಆಘಾತಕಾರಿ ವಿಚಾರ ಹೊರಬಿದ್ದಿದೆ.

ಜಿಲ್ಲೆಯ ಬಹಳಷ್ಟು ಕಡೆಗಳ ಅಂತರ್ಜಲ ಯುರೇನಿಯಂನಿಂದ ತುಂಬಿದೆ. ಯುರೇನಿಯಂ ಪ್ರಮಾಣ ಅತ್ಯಧಿಕವಾಗಿರುವ ನೀರು ಕುಡಿಯಲು ಯೋಗ್ಯವಲ್ಲ ಎಂದು ಅಧ್ಯಯನ ವರದಿ ಹೇಳಿದೆ.ಬಹಳಷ್ಟು ಕಡೆಗಳಲ್ಲಿ ಕುಡಿಯಲು ಮತ್ತು ಕೃಷಿಗೆ ಯುರೇನಿಯಂಯುಕ್ತ ನೀರು ಬಳಕೆ ಆಗುತ್ತಿದೆ ಎಂದು ವರದಿ ಹೇಳಿದೆ.

ಭಾರತೀಯ ವಿಜ್ಞಾನ ಸಂಸ್ಥೆಯದಿವೆಚಾ ವಾಯುಗುಣ ಬದಲಾಣೆ ಕೇಂದ್ರ ಹಾಗೂಮಂಗಳೂರು ವಿಶ್ವವಿದ್ಯಾಲಯದಪರಿಸರ ವಿಕರಣಶೀಲತೆಯಲ್ಲಿ ಸುಧಾರಿತ ಸಂಶೋಧನಾ ಕೇ‌ಂದ್ರದ ಅಧ್ಯಯನ ತಂಡಗಳುರಾಜ್ಯದ 13 ಜಿಲ್ಲೆಗಳ 73 ಹಳ್ಳಿಗಳಲ್ಲಿ ಅಂತರ್ಜಲದಲ್ಲಿ ಯುರೇನಿಯಂ ಹೆಚ್ಚಳದ ಕುರಿತು ಅಧ್ಯಯನ ನಡೆಸಿವೆ.

ADVERTISEMENT

ಇದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ 27 ಹಳ್ಳಿಗಳ ನೀರಿನ ಗುಣಮಟ್ಟವನ್ನು ಅಧ್ಯಯನ ಮಾಡಲಾಗಿದೆ. ಈ ಎಲ್ಲ ಕಡೆಗಳ ನೀರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಣುಶಕ್ತಿ ನಿಯಂತ್ರಣ ಮಂಡಳಿಯು ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಯುರೇನಿಯಂ ಇದೆ. ಬಾಗೇಪಲ್ಲಿ, ಚಿಂತಾಮಣಿ ತಾಲ್ಲೂಕಿನ ಕೆಲವು ಕೊಳವೆಬಾವಿಗಳ ಒಂದು ಲೀಟರ್ ನೀರಿನಲ್ಲಿ 5 ಸಾವಿರ ಮೈಕ್ರೊಗ್ರಾಂ ಯರೇನಿಯಂ ಇದೆ.

ಪೊತೇಪಲ್ಲಿ, ಚಲುಮೇನಹಳ್ಳಿ, ದೊಡ್ಡಕುರುಬರಹಳ್ಳಿ ಸೇರಿದಂತೆ ಬಹಳಷ್ಟು ಗ್ರಾಮಗಳ ನೀರಿನಲ್ಲಿ ಆರೋಗ್ಯ ಸಂಸ್ಥೆಯು ನಿಗದಿಪಡಿಸಿರುವುದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಯುರೇನಿಯಂ ಇದೆ.ಮದ್ದಲಖಾನೆ, ಜಿ.ಮಾದೇಪಲ್ಲಿ, ತಿಮ್ಮಂಪಲ್ಲಿ, ಎಲ್ಲಂಪಲ್ಲಿ, ಚಿಂತಾಮಣಿ ನಗರ, ಬ್ರಾಹ್ಮಣಹಳ್ಳಿಯ ಕೊಳವೆಬಾವಿಗಳ ಒಂದು ಲೀಟರ್ ನೀರಿನಲ್ಲಿ 1 ಸಾವಿರ ಮೈಕ್ರೊಗ್ರಾಂ ಪ್ರಮಾಣದಲ್ಲಿ ಯುರೇನಿಯಂ ಇದೆ. ಯುರೇನಿಯಂಯುಕ್ತ ನೀರನ್ನು ಕುಡಿದರೆ ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ.

ಕುಡಿಯುವ ನೀರಿನ ವಿಚಾರವಾಗಿ ಈ ಹಿಂದಿನಿಂದಲೂಜಿಲ್ಲೆಯಲ್ಲಿ ಅಧ್ಯಯನಗಳು ನಡೆದಿವೆ. ಬಾಗೇಪಲ್ಲಿ, ಗುಡಿಬಂಡೆ ಸೇರಿದಂತೆ ಬಹಳಷ್ಟು ಕಡೆಗಳ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿದೆ. ಈ ಹಿಂದೆ ಈ ವಿಚಾರ ಜಿಲ್ಲೆಯಲ್ಲಿ ಹೆಚ್ಚಿನದಾಗಿಯೇ ಪ್ರತಿಧ್ವನಿಸಿತ್ತು. ಈಗ ಕುಡಿಯಲು ಯೋಗ್ಯವಲ್ಲದ ರೀತಿಯಲ್ಲಿ ನೀರಿನಲ್ಲಿ ಯುರೇನಿಯಂ ಸೇರಿದೆ.

2018ರಲ್ಲಿ ಅಮೆರಿಕದ ಡ್ಯೂಕ್ ವಿಶ್ವವಿದ್ಯಾಲಯವು ಭಾರತದ 16 ರಾಜ್ಯಗಳ ಅಂತರ್ಜಲದಲ್ಲಿ ಸುರಕ್ಷಿತ ಮಟ್ಟಕ್ಕಿಂತಲೂ ಹೆಚ್ಚು ಯುರೇನಿಯಂ ಇದೆ ಎಂದು ತಿಳಿಸಿತ್ತು. ಭಾರತದ ಜಲಪದರಗಳಲ್ಲಿ ಯುರೇನಿಯಂ ಹೆಚ್ಚಿನ ಪ್ರಮಾಣದಲ್ಲಿ ಇದೆ. ಜಲಪದರದಲ್ಲಿನ ನೀರನ್ನು ವಿಪರೀತವಾಗಿ ಬಳಸಿ ಖಾಲಿ ಮಾಡಲಾಗಿದೆ. ಅಳಿದುಳಿದ ಅಂತರ್ಜಲವು ಯುರೇನಿಯಂಯುಕ್ತ ಮಣ್ಣಿನ ಜತೆ ಹರಿದು ಬರುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.