ADVERTISEMENT

ಕೆಟ್ಟುನಿಂತ ಬೋರ್‌ವೆಲ್ ದುರಸ್ತಿಗೆ ಒತ್ತಾಯ

ಅಧಿಕಾರಿಗಳ ವಿರುದ್ಧ ನಗರಸಭೆ ಸದಸ್ಯೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 6:58 IST
Last Updated 28 ಅಕ್ಟೋಬರ್ 2022, 6:58 IST
ಚಿಂತಾಮಣಿಯ ವಾರ್ಡ್ ಸಂಖ್ಯೆ 15ನಲ್ಲಿ ಕೆಟ್ಟಿರುವ ಬೋರ್‌ವೆಲ್
ಚಿಂತಾಮಣಿಯ ವಾರ್ಡ್ ಸಂಖ್ಯೆ 15ನಲ್ಲಿ ಕೆಟ್ಟಿರುವ ಬೋರ್‌ವೆಲ್   

ಚಿಂತಾಮಣಿ: ನಗರದ ವಾರ್ಡ್ 15 ರ ಟಿಪ್ಪು ನಗರದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆಬಾವಿಯ ಪಂಪು, ಮೋಟಾರ್ ಮತ್ತುಬೋರ್‌ವೆಲ್ಕೆಟ್ಟುಹೋಗಿ 15 ದಿನಗಳಾದರೂ, ಇನ್ನೂ ದುರಸ್ತಿಗೆ ಮುಂದಾಗದೆ ಇರುವ ಅಧಿಕಾರಿಗಳ ವಿರುದ್ಧ ನಗರಸಭೆ ಸದಸ್ಯೆ ರುಬಿಯಾ ಸುಲ್ತಾನಾ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಬಂಧ ನಗರಸಭೆ ಅಧಿಕಾರಿಗಳು ಮತ್ತು ಅಧ್ಯಕ್ಷರ ಗಮನಕ್ಕೆ ತಂದಿದ್ದರೂ, ಸಮಸ್ಯೆ ಪರಿಹಾರವಾಗಿಲ್ಲ. ಇದರಿಂದ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ ಎಂದು ಹೇಳಿದರು.

ದೀಪಾವಳಿ ಹಬ್ಬ ಆಚರಣೆಗೂ ನೀರು ಇಲ್ಲದೆ ತೊಂದರೆ ಅನುಭವಿಸಿದ್ದಾರೆ. ಜನರು ನಮ್ಮ ಮನೆಗೆ ಬಂದು ಪ್ರಶ್ನಿಸುತ್ತಿದ್ದಾರೆ. ನಮ್ಮ ಪಕ್ಷವೇ ಅಧಿಕಾರದಲ್ಲಿದ್ದರೂ ಜನರಿಗೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅಧ್ಯಕ್ಷರು ಮತ್ತು ಸದಸ್ಯರ ಮನವಿಗೆ ಕಿವಿಗೊಡುವುದಿಲ್ಲ. ರಾಜೀನಾಮೆ ಕೊಟ್ಟು ಹೋಗುವುದು ಉತ್ತಮ ಎಂಬಂತೆ ಕಾಣುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಕೊಳವೆ ಬಾವಿಗಳಲ್ಲಿ 2-3 ದಿನಗಳಿಗೊಮ್ಮೆ ಪೂರೈಕೆ ಮಾಡುವಷ್ಟು ನೀರು ಇದೆ. ಕೊಳವೆ ಬಾವಿ ಮತ್ತು ಕೈಪಂಪು ಕೆಟ್ಟು ಹೋಗಿವೆ. ಕುಡಿಯುವ ನೀರನ್ನು ಕೊಡಲು ಸಾಧ್ಯವಾಗದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಅವರು, ವಾರ್ಡ್‌ನಲ್ಲಿ ಸ್ವಚ್ಛತೆ, ಯುಜಿಡಿ ಸ್ವಚ್ಛತೆ ಸೇರಿದಂತೆ ಯಾವುದೇ ಕೆಲಸಗಳು ಸರಿಯಾಗಿನಡೆಯುತ್ತಿಲ್ಲ. ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದು, 4-5 ಸದಸ್ಯರ ವಾರ್ಡ್ ಕಾರ್ಯಗಳಿಗೆ ಸೀಮಿತರಾಗಿದ್ದಾರೆ ಎಂದು ದೂರಿದರು.

ಸಂಬಂಧಪಟ್ಟ ಅಧಿಕಾರಿ ಗಳುಇನ್ನಾದರೂ ಎಚ್ಚೆತ್ತು ಕೊಳ್ಳಬೇಕು. ವಾರ್ಡ್‌ನಲ್ಲಿರುವ ಕೊಳವೆ ಬಾವಿಗಳ ಪಂಪು ಮತ್ತು ಮೋಟರ್ ಅನ್ನು ದುರಸ್ತಿ ಮಾಡಿಸಬೇಕು. ಕನಿಷ್ಠ 5 ದಿನಗಳಿಗೊಮ್ಮೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವಾರ್ಡ್ ಜನರು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.