ಶಿಡ್ಲಘಟ್ಟ (ಚಿಕ್ಕಬಳ್ಳಾಪುರ):ಕರ್ಮಯೋಗಿಯಂತೆ ಬದುಕಿದಭಾರತ ರತ್ನಸರ್.ಎಂ.ವಿಶ್ವೇಶ್ವರಯ್ಯಅವರ 158ನೇ ಜನ್ಮ ದಿನವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತಿದೆ.ಈ ದಿನವನ್ನು ಎಂಜಿನಿಯರ್‌ಗಳ ದಿನ ಎಂದು ಸಹ ಕರೆಯಲಾಗುತ್ತದೆ.
102 ವರ್ಷಗಳ ತುಂಬು ಬದುಕಿನಲ್ಲಿವಿಶ್ವೇಶ್ವರಯ್ಯನಾಡಿಗಾಗಿಯೇದುಡಿದವರು. ಇಂದು ಕರ್ನಾಟಕ ರಾಜ್ಯ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕಾದರೆ ಅದಕ್ಕೆವಿಶೇಶ್ವರಯ್ಯಅವರ ಕಠಿಣ ಪರಿಶ್ರಮ ಮತ್ತುದೂರದೃಷ್ಟಿಯೇಮುಖ್ಯ ಅಡಿಪಾಯ.
ವಿಶ್ವೇಶ್ವರಯ್ಯನವರ158ನೇ ಜನ್ಮ ದಿನದ ಅಂಗವಾಗಿ ಅವರು ಚಿಕ್ಕಬಳ್ಳಾಪುರದಲ್ಲಿ ಸ್ಥಾಪಿಸಿದ ಕಾರ್ಖಾನೆ ಹಾಗೂ ಅವರ ಅಂಚೆ ಚೀಟಿಗಳ ಕುರಿತಾದ ಕಿರುಪರಿಚಯ ಇಲ್ಲಿದೆ.
ಚಿಕ್ಕಬಳ್ಳಾಪುರಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದವಿಶ್ವೇಶ್ವರಯ್ಯ,ಗ್ರಾಮೀಣ ಜನರಿಗೆಉದ್ಯೋಗ ನೀಡುವಂತಹ ಕಾರ್ಖಾನೆಯೊಂದನ್ನು ಸ್ಥಾಪಿಸುವಕನಸಿತ್ತು. ಅದಕ್ಕೆಂದೇ ಅವರು 1952ರಲ್ಲಿಶಿಡ್ಲಘಟ್ಟತಾಲ್ಲೂಕಿನಮೇಲೂರುಗ್ರಾಮದಲ್ಲಿ ಕಿಸಾನ್ಸಿಲ್ಕ್ಇಂಡಸ್ಟ್ರಿ ಎಂಬಕಾರ್ಖಾನೆಸ್ಥಾಪಿಸಿದರು.
ಕಾರ್ಖಾನೆ ಸ್ಥಾಪನೆ ಸಭೆಯ ಚಿತ್ರ (ಚಿತ್ರ ಸಂಗ್ರಹ: ಮೇಲೂರು ಎಂ.ಆರ್.ಪ್ರಭಾಕರ್ )
ಸುಮಾರು 67 ವರ್ಷಗಳ ಹಿಂದೆಯೇ ದೂರದೃಷ್ಟಿಯುಳ್ಳ ಗ್ರಾಮೀಣ ಪ್ರಗತಿಯ ಯೋಜನೆಯನ್ನು ಅವರು ರೂಪಿಸಿದ್ದರು. ಈ ಭಾಗದ ಭೂಮಿ ಮತ್ತು ಹವಾಗುಣ, ರೇಷ್ಮೆ ಗೂಡು ಹಾಗೂ ನೂಲು ತಯಾರಿಕೆಗೆಸೂಕ್ತವಾದುದ್ದರಿಂದಕಿಸಾನ್ಸಿಲ್ಕ್ಇಂಡಸ್ಟ್ರಿ ಪ್ರಾರಂಭಿಸಿದರು. ಆ ಮೂಲಕ ಇಲ್ಲಿನ ಜನರು ಆರ್ಥಿಕ ಅಭಿವೃದ್ಧಿಕಾಣಬೇಕು ಎಂಬ ಅವರ ಕನಸುನನಸಾಯಿತು.
ಇದನ್ನೂ ಓದಿ: ಸರ್ ಎಂ.ವಿ. ಬಾಲ್ಯ ನೆನಪಿಸುವ ‘ವಿಶ್ವಕುಟೀರ’
ಮೇಲೂರಿನಿಂದಕಂಬದಹಳ್ಳಿಗೆ ಹೋಗುವ ರಸ್ತೆಯಲ್ಲಿ ಪ್ರಾರಂಭವಾದ ಕಿಸಾನ್ಸಿಲ್ಕ್ಇಂಡಸ್ಟ್ರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪ್ರಾರಂಭವಾದ ಮೊಟ್ಟಮೊದಲ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕಾರ್ಖಾನೆ ಆರಂಭಕ್ಕೂ ಮುನ್ನ ವಿಶ್ವೇಶ್ವರಯ್ಯನವರು ಹಲವು ಸಭೆಗಳನ್ನು ನಡೆಸಿದ್ದರು. ಆ ಸಭೆಗಳಿಗೆಮಳ್ಳೂರು ಜಿ.ಪಾಪಣ್ಣ, ಜಿ.ಪಿಳ್ಳಪ್ಪ, ಜಿ.ನಾರಾಯಣಪ್ಪ, ಕಂಬದಹಳ್ಳಿ ದೊಡ್ಡಪ್ಪಯ್ಯಣ್ಣ, ಪಟೇಲ್ ಪಿಳ್ಳೇಗೌಡರು, ಮೇಲೂರು ಎಂ.ಎಸ್.ವೆಂಕಟರೆಡ್ಡಿ, ಶಾನುಭೋಗ ಎಂ.ಎಸ್.ಸೀತಾರಾಮರಾವ್, ಮೇಲೂರು ಟಿ.ಬಚ್ಚಪ್ಪ ಮತ್ತಿತರ ಭಾಗವಹಿಸುತ್ತಿದ್ದರು.1952ರಲ್ಲಿ ಈ ಕಾರ್ಖಾನೆಯನ್ನುಸ್ವತಹವಿಶ್ವೇಶ್ವರಯ್ಯಅವರೇಉದ್ಘಾಟನೆ ಮಾಡಿದರು.
ಅಂಚೆ ಚೀಟಿಯಲ್ಲಿವಿಶ್ವೇಶ್ವರಯ್ಯ
ಸಾಮಾನ್ಯವಾಗಿ ಯಾವುದೇ ಪ್ರಸಿದ್ಧ ಸಂಸ್ಥೆ ಅಥವಾ ವ್ಯಕ್ತಿಗೆ ನೂರು ವರ್ಷ ತುಂಬಿದಾಗ ವಿಶೇಷ ಅಂಚೆ ಚೀಟಿಯನ್ನುಹೊರತರಲಾಗುತ್ತದೆ. ಕರ್ನಾಟಕಕ್ಕೆ ಇಂತಹ ಗೌರವತಂದುಕೊಟ್ಟವರಲ್ಲಿವಿಶ್ವೇಶ್ವರಯ್ಯಮೊದಲಿಗರು.
ಜೀವಂತವಿರುವಾಗಲೇ ವ್ಯಕ್ತಿಗಳ ಗೌರವಾರ್ಥ ಅಂಚೆ ಚೀಟಿ ಹೊರತರುವುದು ಭಾರತದಲ್ಲಿ ತುಂಬಾ ವಿರಳ.ವಿಶ್ವೇಶ್ವರಯ್ಯಬದುಕಿರುವಾಗಲೇ ತಮ್ಮದೇ ಅಂಚೆ ಚೀಟಿಯನ್ನುಕಂಡ ಅಪರೂಪದ ಭಾಗ್ಯಶಾಲಿ!ಸರ್.ಎಂ.ವಿಅವರ 15 ಪೈಸೆ ಮುಖಬೆಲೆಯ ಈ ಅಂಚೆ ಚೀಟಿ, ಅಶೋಕ ಸ್ತಂಭಜಲಚಿಹ್ನೆಯನ್ನುಹೊಂದಿದ್ದು ಕಂದು ಮತ್ತುಕ್ಯಾರಮೈನ್ಮಿಶ್ರ ವರ್ಣದಲ್ಲಿಮುದ್ರಿತವಾಗಿದೆ.
1960ಸೆಪ್ಟೆಂಬರ್15ರಂದುಸರ್.ಎಂ.ವಿ. ಅವರಿಗೆ ನೂರು ವರ್ಷ ತುಂಬಿದ ದಿನದಂದೇಕೇಂದ್ರಸರ್ಕಾರಅವರ ಗೌರವಾರ್ಥ ಈ ಅಂಚೆ ಚೀಟಿಯನ್ನುಹೊರತಂದಿತ್ತು. ಈ ವಿಶೇಷ ಅಂಚೆ ಚೀಟಿ ಸರಣಿಯಲ್ಲಿ ಕರ್ನಾಟಕಕ್ಕೆ ಲಭಿಸಿದ ಮೊದಲ ಅಂಚೆ ಚೀಟಿಇದು.
ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ 2010 ಸೆಪ್ಟೆಂಬರ್ 15ರಂದು ವಿಶ್ವೇಶ್ವರಯ್ಯ ಅವರ 150ನೇ ಜನ್ಮದಿನ ಸಂದರ್ಭದಲ್ಲಿ ಬಿಡುಗಡೆಯಾದ ವಿಶೇಷ ಅಂಚೆ ಲಕೋಟೆ
2010ರಲ್ಲಿವಿಶ್ವೇಶ್ವರಯ್ಯನವರ150ನೇಜನ್ಮದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿಅವರ ಸ್ಮರಣಾರ್ಥ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. 5 ರೂಪಾಯಿ ಮುಖಬೆಲೆಯ ಅಂಚೆಲಕೋಟೆಯುಸರ್.ಎಂ.ವಿಅವರ ಚಿತ್ರವಿರುವ ವಿಶೇಷಸೀಲ್, ಅವರು ವಾಸಿಸುತ್ತಿದ್ದ ಮನೆ ಹಾಗೂಭಾವಚಿತ್ರವನ್ನು ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.