ADVERTISEMENT

ಚಿಕ್ಕಬಳ್ಳಾಪುರ | ಝೀಕಾ ವೈರಸ್: ಗುಮ್ಮಾಳ್ಳಪಲ್ಲಿ ಗ್ರಾಮದಲ್ಲಿ ಜನ ಜಾಗೃತಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2023, 13:39 IST
Last Updated 12 ನವೆಂಬರ್ 2023, 13:39 IST
ಪೋಲನಾಯಕನಹಳ್ಳಿ ಗ್ರಾ.ಪಂನ ಗುಮ್ಮಾಳ್ಳಪಲ್ಲಿ ಗ್ರಾಮದಲ್ಲಿ ಝೀಕಾ ವೈರಸ್ ಬಗ್ಗೆ ಜನ ಜಾಗೃತಿ ನಡೆಸಲಾಯಿತು
ಪೋಲನಾಯಕನಹಳ್ಳಿ ಗ್ರಾ.ಪಂನ ಗುಮ್ಮಾಳ್ಳಪಲ್ಲಿ ಗ್ರಾಮದಲ್ಲಿ ಝೀಕಾ ವೈರಸ್ ಬಗ್ಗೆ ಜನ ಜಾಗೃತಿ ನಡೆಸಲಾಯಿತು   

ಚೇಳೂರು: ಮನೆಗಳ ಮುಂದೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ನೀರಿನ ತೊಟ್ಟಿಗಳಲ್ಲಿ ನೀರು ವಾರಕ್ಕೊಮ್ಮೆಯಾದರೂ ಬಿಸಿಲಿಗೆ ಇಟ್ಟು ಒಣಗಿಸಿ ಸೊಳ್ಳೆಗಳಿಂದ ಪಾರಾಗಬೇಕು ಎಂದು ಪೋಲನಾಯಕನಹಳ್ಳಿ ಆಶಾ ಕಾರ್ಯಕರ್ತೆ ರಾಧ ಹೇಳಿದರು.

ಶನಿವಾರ ಪೋಲನಾಯಕನಹಳ್ಳಿ ಗ್ರಾ.ಪಂ ಗುಮ್ಮಾಳ್ಳಪಲ್ಲಿ ಗ್ರಾಮದಲ್ಲಿ ಝೀಕಾ ವೈರಸ್ ಬಗ್ಗೆ ಜನಜಾಗೃತಿ, ಗ್ರಾಮ ಆರೋಗ್ಯ ಮತ್ತು ಪೌಷ್ಟಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಾವುದೇ ಗ್ರಾಮಗಳಲ್ಲಿ ಮೊದಲಿಗೆ ಚರಂಡಿ ವ್ಯವಸ್ಥೆ ಸರಿ ಇರಬೇಕು. ಮಾನವನಿಗೆ ಮೂಲ ಸವಲತ್ತುಗಳು ದೊರೆತಾಗ ಮನುಷ್ಯ ಆರೋಗ್ಯವಾಗಿರುತ್ತಾರೆ ಎಂದರು.

ADVERTISEMENT

ಗ್ರಾಮದಲ್ಲಿ ಸರ್ಕಾರಿ ಶಾಲಾ ಮಕ್ಕಳಿಂದ ಝೀಕಾ ವೈರಸ್ ಕುರಿತು ಮೆರವಣಿಗೆಯ ಮೂಲಕ ಜಾಥಾ ಮಾಡಿ ಜನರಲ್ಲಿ ಅರಿವು ಮೂಡಿಸಿದರು.

ಶಿಕ್ಷಕ ನರಸಿಂಹರೆಡ್ಡಿ, ಅಂಗನವಾಡಿ ಕಾರ್ಯಕರ್ತೆ ಅಮರಾವತಿ, ಮುನಿರತ್ನಮ್ಮ, ಗಾಯಿತ್ರಿ, ಅನಿತ, ಸರಿತ, ಆಶಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.