ADVERTISEMENT

ದೇವರಾಜ ಅರಸು ಮೌನಕ್ರಾಂತಿ ಅನುಕರಣೀಯ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2014, 10:18 IST
Last Updated 21 ಆಗಸ್ಟ್ 2014, 10:18 IST

ಚಿಕ್ಕಮಗಳೂರು: ಬಲಿಷ್ಠ ಜಾತಿಯ ಕೈಯಲ್ಲಿದ್ದ ಅಧಿಕಾರವನ್ನು ಮೌನ ಕ್ರಾಂತಿಯ  ಮೂಲಕ ಸಮಾಜದ ತಳ ಹದಿಯ ಜನರಿಗೆ ನೀಡಿದವರು ಡಿ. ದೇವರಾಜ ಅರಸು ಎಂದು ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವರಾದ ಮಲ್ಲಿಕಾ ಘಂಟಿ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾ ತರ ಇಲಾಖೆ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮತ್ತು ಅಲ್ಪಸಂಖ್ಯಾತರ ಅಭಿ ವೃದ್ಧಿ ನಿಗಮ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಪರಿವರ್ತ ನೆಯ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 99ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ದೇವರಾಜ ಅರಸು ಅವರ ತತ್ವ ಮತ್ತು ಸಾಧನೆ ಕುರಿತು ಉಪನ್ಯಾಸ ನೀಡಿದರು.

ಧ್ವನಿ ಇಲ್ಲದ ಜನರಿಗೆ ಧ್ವನಿಯಾದ ವರು ದೇವರಾಜ ಅರಸು. ಮೇಲ್ವರ್ಗ ದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಭೂಸುಧಾರಣೆ ಕಾನೂನನ್ನು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೆ ತಂದರು. ಹಾಸ್ಟೆಲ್ ಆರಂಭಿಸುವ ಮೂಲಕ ಅನ್ನ ನೀಡಿದ್ದರಿಂದ ಇಂದು ನಾವೆಲ್ಲ ಅವರ ದೂರದೃಷ್ಟಿ ಚಿಂತನೆಯ ಫಲಾನುಭವಿಗಳಾಗಿದ್ದೇವೆ ಎಂದರು.

ದೇವರಾಜ ಅರಸು ಮುಖ್ಯಮಂತ್ರಿ ಗಳಾಗಿದ್ದಾಗ ಜಾರಿಗೆ ತಂದ ಯೋಜನೆ ಗಳನ್ನು ಆಡಳಿತ ವರ್ಗ ಹಗಲು, ರಾತ್ರಿ ಶ್ರಮಿಸಿ ಅನುಷ್ಠಾನಕ್ಕೆ ತಂದಿತು. ಈಗಲೂ ಕದ್ದುಮುಚ್ಚಿ ನಡೆಯುತ್ತಿರುವ ಜೀತ ಪದ್ಧತಿಯನ್ನು ಅಂದೇ ನಿರ್ಮೂಲನೆ ಮಾಡಲು ಪಣ ತೊಟ್ಟವರು ಎಂದು ತಿಳಿಸಿದರು.

ಅಂದು ಜಾರಿಗೆ ತಂದ ಯೋಜನೆ ಗಳನ್ನು ಡಂಗುರ ಹೊಡೆಸಿ ಜನರಿಗೆ ತಲುಪಿಸಲಿಲ್ಲ. ಆದರೂ ಯೋಜನೆಗಳು ಜನರ ಮನಸ್ಸು ಮತ್ತು ಮನೆಯನ್ನು ತಲುಪಿದ್ದವು. ಹಸಿವಿನಿಂದ ಕಂಗೆಟ್ಟ ಜನರಿಗೆ ಈಗಲೂ ಅರಸು ನೆನಪಾ ಗುತ್ತಾರೆ ಎಂದು ಹೇಳಿದರು. ಅಂದು ಭಾಗ್ಯಜ್ಯೋತಿ ಯೋಜನೆ ಮೂಲಕ ಶೋಷಿತರ ಮನೆಗೆ ದೀಪ ಬಂದರೆ ಮೂಗು ಮುರಿಯುವ ಜನರಿ ದ್ದರೂ. ಈಗಲೂ ಅನ್ನಭಾಗ್ಯ, ಕ್ಷೀರ ಭಾಗ್ಯ ಯೋಜನೆ ಜಾರಿಗೆ ಬಂದಾಗ ಎಷ್ಟೊ ಜನ ಮೂಗು ಮುರಿದರು ಎಂದು ನುಡಿದರು.

ಆದರ್ಶ ವ್ಯಕ್ತಿಗಳನ್ನು ಪೂಜಿಸುವ ಬದಲು ಅವರ ತತ್ವ, ಚಿಂತನೆಗಳನ್ನು ಜೀವಂತಗೊಳಿಸುವ ಪ್ರಯತ್ನ ಮಾಡ ಬೇಕಾಗಿದೆ. ಕೆಲವರು ಬದುಕಿದ್ದು ಸಾಯುತ್ತಾರೆ. ಆದರೆ, ದೇವರಾಜ ಅರ ಸರು ಸತ್ತು ಬದುಕಿದ್ದಾರೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇ ಗೌಡ, ದಲಿತರು, ಹಿಂದುಳಿದ ವರ್ಗದ ವರನ್ನು ಪರಿವರ್ತನೆಗೊಳಿಸಿ ಅವರನ್ನು ಉದ್ದರಿಸುವ ಧ್ಯೇಯವನ್ನು ಅರಸು ಹೊಂದಿದ್ದರು. ಆಡಳಿತ ಅವಧಿ ಯಲ್ಲಿ ಎದುರಾದ ಸವಾಲುಗಳನ್ನು ದಿಟ್ಟವಾಗಿ ಎದುರಿಸಿದವರು ಎಂದು ತಿಳಿಸಿದರು.

ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಅಧಿಕಾರಕ್ಕಿಂತ ಸಾರ್ವಜನಿಕ ಕಲ್ಯಾಣ ಅರಸು ಅವರಿಗೆ ಮುಖ್ಯವಾಗಿತ್ತು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.