ADVERTISEMENT

ವಿರೋಧ ಪಕ್ಷಗಳಿಗೆ ತಕ್ಕ ಪಾಠ: ಶಾಸಕ ಶ‍್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 15:34 IST
Last Updated 23 ನವೆಂಬರ್ 2024, 15:34 IST
ಪುರಸಭಾ ಮುಂಭಾಗದಲ್ಲಿ ತರೀಕೆರೆ ಬ್ಲಾಕ್‍ ಕಾಂಗ್ರೇಸ್‍ ವತಿಯಿಂದ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿದರು.
ಪುರಸಭಾ ಮುಂಭಾಗದಲ್ಲಿ ತರೀಕೆರೆ ಬ್ಲಾಕ್‍ ಕಾಂಗ್ರೇಸ್‍ ವತಿಯಿಂದ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿದರು.   

ತರೀಕೆರೆ: ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ವಿರೋಧ ಪಕ್ಷದವರು ವಿನಾ ಕಾರಣ ಆರೋಪ ಮಾಡುತ್ತಿದ್ದು ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರ ಶಾಪದಿಂದ ಮತದಾರರು ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‍ ಪಕ್ಷವನ್ನು ಬೆಂಬಲಿ ವಿರೋಧ ಪಕ್ಷಗಳಿಗೆ ಪಾಠ ಕಲಿಸಿದ್ದಾರೆ ಎಂದು ಶಾಸಕ ಜಿ.ಎಚ್. ಶ‍್ರೀನಿವಾಸ್ ಹೇಳಿದರು.

ಪಟ್ಟಣದ ಪುರಸಭೆ ಕಚೇರಿಯ ಮುಂಭಾಗದಲ್ಲಿ ತರೀಕೆರೆ ಬ್ಲಾಕ್‍ ಕಾಂಗ್ರೆಸ್‍ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಮಾತನಾಡಿದ ಅವರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಎಲ್ಲ ಜಾತಿ ಧರ್ಮದವರು ಒಗ್ಗಟ್ಟಾಗಿ ಶ್ರಮಿಸಿದ್ದಾರೆ ಹೇಳಿದರು.

ಉಪ ಚುನಾವಣೆ ಫಲಿತಾಂಶ ಮತ್ತು ವಯನಾಡ್‌ನಲ್ಲಿ ಕಾಂಗ್ರೆಸ್‍ ನಾಯಕಿ ಪ್ರಿಯಾಂಕ ಅವರ ಅಭೂತಪೂರ್ವ ವಿಜಯದಿಂದ ಮುಂದಿನ ದಿನಗಳಲ್ಲಿ ಜಾತಿವಾದಿಗಳು, ಗಣಿ ಧಣಿಗಳು ಮತ್ತು ಬಂಡವಾಳಶಾಹಿಗಳಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್‍ ಅಧ್ಯಕ್ಷ ಎಚ್.ಯು. ಫಾರೂಕ್‍ ಹೇಳಿದರು.

ADVERTISEMENT

ನಗರ ಘಟಕದ ಅಧ್ಯಕ್ಷ ವರ್ಮಾ ಪ್ರಕಾಶ್‍, ಪುರಸಭಾ ಸದಸ್ಯರಾದ ಟಿ. ದಾದಾಪೀರ್, ಪರಮೇಶ್, ಆದಿಲ್ ಪಾಷ, ವೇಣುಪ್ರಿಯಾ, ಕುಮಾರ್, ಪಕ್ಷದ ಮುಖಂಡರಾದ ಸಮೀವುಲ್ಲಾ, ಅಮ್ಜದ್, ಜಗದೀಶ್, ಇರ್ಷಾದ್, ಅಬೂಬಕರ್, ರಘು ಮೊದಲಾದವರಿದ್ದರು.

ಉಪ ಚುನಾವಣೆಯಲ್ಲಿ ಕಾಂಗ್ರೇಸ್‍ ಪಕ್ಷದ ವಿಜಯೋತ್ಸವ ಸಂದರ್ಭದಲ್ಲಿ ಶಾಸಕ ಜಿ.ಎಚ್. ಶ್ರೀನಿವಾಸ್‍ರವರಿಗೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಚ್.ಯು. ಫಾರೂಕ್ ಸಿಹಿ ತಿನಿಸಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.